ಲಖನೌ: 'ವಿರೋಧ ಪಕ್ಷಗಳ ಒಕ್ಕೂಟವಾದ 'ಇಂಡಿಯಾ'ವು ಕ್ರಮೇಣ ಒಡೆಯುತ್ತಿದೆ' ಎಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಂಕಜ್ ಚೌಧರಿ ಟೀಕಿಸಿದ್ದಾರೆ.
ಇಂಡಿಯಾ' ಒಕ್ಕೂಟದ ಸಭೆಯು ಸೋಮವಾರ ನವದೆಹಲಿಯಲ್ಲಿ ನಿಗದಿಯಾಗಿದೆ.
'ಇಂಡಿಯಾ ಒಕ್ಕೂಟದ ಯಾವ ಬಣವು ಸಭೆ ನಡೆಸಲಿದೆ?
40 ವರ್ಷಗಳಿಂದ ಕಾಂಗ್ರೆಸ್ ಜೊತೆಯಲ್ಲಿದ್ದ ಡಿಎಂಕೆ ದ್ರೋಹವೆಸಗಿರುವುದು ಆ ಪಕ್ಷದ ಹೇಳಿಕೆಯಿಂದಲೇ ಖಚಿತಪಟ್ಟಿದೆ. ಒಕ್ಕೂಟವು ಕ್ರಮೇಣ ಒಡೆದು ಹೋಗುವುದನ್ನು ನೀವೇ ನೋಡಲಿದ್ದೀರಿ' ಎಂದು ಅವರು ತಿಳಿಸಿದ್ದಾರೆ.

