ಕಾಸರಗೋಡು: ಐಕ್ಯರಂಗ ಸರ್ಕಾರದ ಚೊಚ್ಚಲ ಬಜೆಟನ್ನು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ ಶೂಕ್ರವಾರ ಮಂಡಿಸಿದರು. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವ ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಜಾರಿಗೊಳಿಸಲಾಗುವುದು.
ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಅರ್ಹರಾದ ಎಲ್ಲರಿಗೂ ಸವಲತ್ತು ಜಾರಿಗೊಳಿಸಲಾಗುವುದು. ಅಲ್ಲದೆ ಎಂಡೋಸಲ್ಫಾನ್ ಸಂತ್ರಸ್ತರನ್ನು ಸರ್ಕಾರವೇ ವಹಿಸಿಕೊಳ್ಳಲಿದೆ. ಕಾಸರಗೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ಕಾರ್ಯ ಶೀಘ್ರ ಪೂರ್ತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಗೆ 1,422 ಕೋಟಿ ರೂ., ಕ್ರೀಡೆ ಮತ್ತು ಯುವಜನ ವಲಯಕ್ಕೆ 175.77 ಕೋಟಿ ರೂ., ಕೈಗಾರಿಕಾ ಅಭಿವೃದ್ಧಿ ವಲಯಕ್ಕೆ 102 ಕೋಟಿ ರೂ.*ವನ್ನು ಬಜೆಟ್‍ನಲ್ಲಿ ಮೀಸಲಿಸಲಾಗಿದೆ. ಸಮುದ್ರ, ಜಲಸಾರಿಗೆ, ರಸ್ತೆ ಮತ್ತು ರೈಲ್ವೆಯನ್ನು ಪರಸ್ಪರ ಜೋಡಿಸಿ ಮಿಶನ್ ಸಮುದ್ರ ಎಂಬ ಯೋಜನೆಗೆ ರೂಪು ನೀಡಲಾಗಿದೆ. ಇದಕ್ಕಾಗಿ ಬಜೆಟ್‍ನಲ್ಲಿ 400 ಕೋಟಿ ರೂ.ಮೀಸಲಿರಿಸಲಾಗಿದೆ.
ಕೇರಳವನ್ನು ಏಷ್ಯಾದ ಪ್ರಧಾನ ಏವಿಯೇಶನ್ ಹಬ್ ಆಗಿ ಬದಲಾಯಿಸಲು 200 ಕೋಟಿ ರೂ., ಐಟಿ ವಿಭಾಗವನ್ನು ಕೇರಳ ಮುಂಜಾಗ್ರತಾ ಮಿಶನ್ ಹಾಗೂ ವಯೋಜನ ಇಲಾಖೆಗಾಗಿ ತಲಾ 10 ಕೋಟಿ ರೂ. ಮೀಸಲಿಸಲಾಗಿದೆ. ಊಮ್ಮನ್ ಚಾಂಡಿ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಗುವುದು. ಯೋಜನೆಯನ್ವಯ ಪ್ರತಿ ಕುಟುಂಬಕ್ಕೆ ವಾರ್ಷಿಕ ತಲಾ 25 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಲಾಗುವುದು. ಲೋಕೋಪಯೋಗಿ ಇಲಾಖೆಗೆ 5259 ಕೋಟಿ ರೂ.,ಆಪರೇಶನ್ ತೂಫಾನ್‍ಗೆ 10 ಕೋಟಿ ರೂ., ಪ್ರಿಯದರ್ಶಿನಿ ಉಚಿತ ಪ್ರಯಾಣಕ್ಕಾಗಿ 600 ಕೋಟಿ ರೂ., ಕ್ರೀಡಾ ಯೋಜನೆಯನ್ವಯ ಮಲಬಾರ್‍ನಲ್ಲಿ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣಕ್ಕಾಗಿ 50 ಕೋಟಿ ರೂ. ಮೀಸಲಿರಿಸಲಾಗಿದೆ.

