HEALTH TIPS

25 ವರ್ಷಗಳಿಂದ ಎಐಎಡಿಎಂಕೆಯಲ್ಲಿದ್ದ ನಿರ್ದೇಶಕ ಉದಯ್ ಸೇರಿ ಹಲವರು ಟಿವಿಕೆ ಸೇರ್ಪಡೆ

ಚೆನ್ನೈ: ದಳಪತಿ ವಿಜಯ್ ಅವರು ಪಕ್ಷ ಕಟ್ಟಿ ಅಧಿಕಾರದ ಗದ್ದುಗೆ ಏರಿದ ಬಳಿಕ ತಮಿಳುನಾಡಿನಲ್ಲಿ ಇತರೆ ಪಕ್ಷಗಳ ನಾಯಕರು ಟಿವಿಕೆ ಪಕ್ಷದತ್ತ ಮುಖ ಮಾಡುತ್ತಿದ್ದಾರೆ.

ಚಲನಚಿತ್ರ ನಿರ್ದೇಶಕ ಆರ್‌.ವಿ. ಉದಯ್ ಕುಮಾರ್ ಮತ್ತು ಎಐಎಡಿಎಂಕೆಯ ನಾಯಕಿ, ಮಾಜಿ ಸಚಿವೆ ಗೋಮತಿ ಶ್ರೀನಿವಾಸನ್ ಸೇರಿದಂತೆ ಹಲವು ರಾಜಕಾರಣಿಗಳು ಇಂದು ಟಿವಿಕೆ ಪಕ್ಷವನ್ನು ಸೇರಿದ್ದಾರೆ.

ಸುಮಾರು 25 ವರ್ಷಗಳಿಂದ ಎಐಎಡಿಎಂಕೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಉದಯ್ ಕುಮಾರ್, ಜೂನ್ 16ರಂದು ರಾಜೀನಾಮೆ ನೀಡಿದ್ದರು. 90ರ ದಶಕದ ಕಮರ್ಷಿಯಲ್ ಚಿತ್ರಗಳ ಹಿಂದಿನ ಪ್ರಮುಖ ಶಕ್ತಿಯಾಗಿದ್ದ ಅವರು, ಚಿನ್ನ ಗೌಂಡರ್, ಯಜಮಾನ್, ಸಿಂಗರವೇಲನ್, ಕನನ್ನು ವಾಸಲ್ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಎಂಜಿಆರ್ ಸಂಪುಟದಲ್ಲಿ ಸಚಿವರಾಗಿದ್ದ ಗೋಮತಿ ಶ್ರೀನಿವಾಸನ್, ಎಂಜಿಎಂ ಸುಬ್ರಮಣಿಯನ್, ತಿರುವೈಯಾರುವಿನ ಮಾಜಿ ಶಾಸಕ ಸೆಮಾ ನಾರಾಯಣನ್, ತಮಿಳುನಾಡು ಮಡಿಕೆ ವ್ಯಾಪಾರಿಗಳು ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ್ ಮಿಶ್ರಾ, ಐಎಎಡಿಎಂಕೆಯ ಸಾಕ್ಷರತಾ ವಿಭಾಗದ ಮಾಜಿ ಉಪಪಾಧ್ಯಕ್ಷ ಐ.ಸಿ. ಶೇಖರ್, ಎಎಂಎಂಕೆಯ ಎ.ಎನ್. ರಾಜು ಸೇರಿದಂತೆ ರಾಜಕೀಯದಲ್ಲಿ ಹೆಸರು ಮಾಡಿರುವ ಹಲವು ನಾಯಕರು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್, ಆಡವ್ ಅರ್ಜುನ ಸೇರಿ ಇನ್ನಿತರರ ಸಮ್ಮುಖದಲ್ಲಿ ಪಕ್ಷ ಸೇರಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries