'ಹುಟ್ಟಲಿರುವ ಮುಸ್ಲಿಂ ಮಕ್ಕಳಿಗೂ ಬೆದರಿಕೆ ಹಾಕುವ ಮಟ್ಟಿಗೆ ದೇಶದಲ್ಲಿ ದ್ವೇಷ ಭಾಷಣವು ಸಾಮಾನ್ಯವಾಗಿದೆ.
ಬಿಜೆಪಿಯು ಬಹಳವಾಗಿ ಹೇಳಿಕೊಳ್ಳುವ ವಿಕಸಿತ ಭಾರತ ಯೋಜನೆಯು ಹೀಗೇ ಕಾಣುತ್ತಿದೆ'ಎಂದು ಹೇಳಿದ್ದಾರೆ.
ಮುಸ್ಲಿಮರ ಮನೆಗಳು ಮತ್ತು ಮಸೀದಿಗಳನ್ನು ನಿರ್ಭಯದಿಂದ ಕೆಡವಲಾಗುತ್ತಿದೆ. ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಆದಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದಿದ್ದಾರೆ.
ದ್ವೇಷ ಭಾಷಣದ ಬಗ್ಗೆ ಜನರ ನಿರಂತರ ಮೌನವು ಸಮಾಜವನ್ನು ವಿಭಜಿಸಲು ಪ್ರಯತ್ನಿಸುವವರಿಗೆ ಧೈರ್ಯ ತುಂಬುತ್ತಿದೆ ಎಂದು ಮೆಹಬೂಬ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಹಿಂದೂ ರಕ್ಷಾ ದಳದ ಅಧ್ಯಕ್ಷ ಲಲಿತ್ ಶರ್ಮಾ ಅವರು ಮುಸ್ಲಿಂ ಮಹಿಳೆಯರು ಮತ್ತು ಹುಟ್ಟಲಿರುವ ಶಿಶುಗಳನ್ನು ಗುರಿಯಾಗಿಸಿಕೊಂಡು ಮಾಡಿದ ದ್ವೇಷ ಭಾಷಣವನ್ನು ಅವರು ಉಲ್ಲೇಖಿಸಿದ್ದಾರೆ.

