ಪಟ್ನಾ: ತನ್ನ ಮಾಜಿ ಸಹಾಯಕ ಆಕಾಶ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮನ್ನು ಮತ್ತು ತಮ್ಮ ತಂದೆ ಲಾಲು ಪ್ರಸಾದ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಜನಶಕ್ತಿ ಜನತಾ ದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಅವರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಸಚಿವಾಲಯ ಪೊಲೀಸ್ ಠಾಣೆಯಲ್ಲಿ ಯಾದವ್ ಶುಕ್ರವಾರ ದೂರು ದಾಖಲಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, 'ನನ್ನ ದೂರಿನ ಆಧಾರದ ಮೇಲೆ ಆಕಾಶ್ ಯಾದವ್, ಅವರ ಸಹೋದರಿ ಅನುಷ್ಕಾ ಯಾದವ್ ಮತ್ತು ಇತರ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರು ನನ್ನ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ತಂದೆ ಲಾಲು ಪ್ರಸಾದ್ ಅಸ್ವಸ್ಥರಾಗಿದ್ದಾರೆ. ನನ್ನನ್ನು ಮತ್ತು ನನ್ನ ತಂದೆಯನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ತಮಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸಿಎಂ ಸಾಮ್ರಾಟ್ ಚೌಧರಿ ಅವರನ್ನು ತೇಜ್ ಪ್ರತಾಪ್ ಒತ್ತಾಯಿಸಿದ್ದಾರೆ.
ಬೇರೊಬ್ಬರ ಜೊತೆ ಮದುವೆಯಾಗಿದ್ದರೂ ಸಹ ಜೀವನ ನಡೆಸಿದ್ದ ಅನುಷ್ಕಾ ಯಾದವ್ ಸೇರಿದಂತೆ ದೂರಿನಲ್ಲಿ ಹೆಸರಿರುವ ಎಲ್ಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಸಂಬಂಧದ ವಿಷಯ ಬಯಲಾಗುತ್ತಿದ್ದಂತೆ ತಂದೆ ಲಾಲು ಪ್ರಸಾದ್, ತೇಜ್ ಪ್ರತಾಪ್ ಅವರನ್ನು ಆರ್‌ಜೆಡಿಯಿಂದ ಉಚ್ಚಾಟಿಸಿದ್ದರು.
ನಮಗೆ ಬಂದಿರುವ ಬೆದರಿಕೆ ರಾಜಕೀಯ ಸಂಚಿನ ಭಾಗವಾಗಿದೆ ಎಂದಿದ್ದಾರೆ. ಎದುರಾಳಿಗಳ ಜೊತೆ ಸೇರಿ ಆಕಾಶ್ ನಮ್ಮ ಹತ್ಯೆಗೆ ಉದ್ದೇಶಿಸಿದ್ದಾನೆ ಎಂದು ಆರೋಪಿಸಿದ್ದಾರೆ.

