HEALTH TIPS

ಅರ್ಜೆಂಟೀನದಲ್ಲಿ 26 ಮೀಟರ್ ಎತ್ತರದ ಲಿಯೊನೆಲ್ ಮೆಸ್ಸಿ ಪ್ರತಿಮೆ ಅನಾವರಣ

ಬ್ಯುನಸ್ ಐರಿಸ್: ಫಿಫಾ ವಿಶ್ವಕಪ್ ಸಮಯದಲ್ಲಿ ಅರ್ಜೆಂಟೀನದಲ್ಲಿ ಲಿಯೊನೆಲ್ ಮೆಸ್ಸಿ ಮೇಲಿನ ಪ್ರೀತಿ ಹೆಚ್ಚಾಗಿದೆ. ಪ್ಯಾಟಗೋನಿಯಾದಲ್ಲಿ ಫುಟ್ಬಾಲ್ ಐಕಾನ್‌ನ 26 ಮೀಟರ್ ಎತ್ತರದ ದೈತ್ಯದ ಪ್ರತಿಮೆ ಅನಾವರಣಗೊಂಡಿದೆ. ಅಭಿಮಾನಿಗಳಿಂದ ನಿರ್ಮಿಸಲ್ಪಟ್ಟ ಪ್ರತಿಮೆಯು ದೇಶಾದ್ಯಂತ ಗಮನ ಸೆಳೆಯುತ್ತಿದೆ.

ದಕ್ಷಿಣ ಅರ್ಜೆಂಟೀನದ ಕಟ್ರಲ್ ಕೋ ಪಟ್ಟಣದ ಹೊರ ವಲಯದಲ್ಲಿರುವ ಈ ಬೃಹತ್ ಪ್ರತಿಮೆ 70 ಟನ್ ಉಕ್ಕು ಹಾಗೂ ಕಬ್ಬಿಣದಿಂದ ತಯಾರಿಸಲ್ಪಟ್ಟಿದೆ. ಮೆಸ್ಸಿ ಅವರು ವಿಶ್ವಕಪ್ ಟ್ರೋಫಿಯೊಂದಿಗೆ ಮಂಡಿಯೂರಿ ಕುಳಿತ್ತಿರುವ ಚಿತ್ರವು ಪ್ರತಿಮೆಯಲ್ಲಿ ಮೂಡಿಬಂದಿದೆ.

ಈ ಪ್ರತಿಮೆಯನ್ನು ಜೂ.16ರಂದು ಅರ್ಜೆಂಟೀನ ತಂಡ ವಿಶ್ವಕಪ್ ಅಭಿಯಾನ ಆರಂಭಿಸಿದ ದಿನದಂದೇ ಉದ್ಘಾಟಿಸಲಾಗಿತ್ತು. ಬುಧವಾರ 39ನೇ ವರ್ಷಕ್ಕೆ ಕಾಲಿಟ್ಟಿರುವ ಅರ್ಜೆಂಟೀನದ ನಾಯಕನಿಗೆ ಮೀಸಲಾಗಿರುವ ಅತಿ ದೊಡ್ಡ ಸ್ಮಾರಕ ಇದಾಗಿದೆ.

ಈ ಪ್ರತಿಮೆಯನ್ನು ಶಿಲ್ಪಿ ಆಲ್ಡೊ ಬೆರೋಯಿಸಾ ರಚಿಸಿದ್ದಾರೆ. ಇದನ್ನು ಪೂರ್ಣಗೊಳಿಸಲು ಅವರು 18 ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಈ ಪ್ರತಿಮೆಯ ರಚನೆಗೆ ಸಹಾಯ ಮಾಡಿರುವ 1,300ಕ್ಕೂ ಅಧಿಕ ಅಭಿಮಾನಿಗಳ ಹೆಸರನ್ನು ಈ ಪ್ರತಿಮೆ ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries