HEALTH TIPS

ಸರೋವರ ಕ್ಷೇತ್ರ ಶ್ರೀಅನಂತಪುರ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ: ಜೂನ್ 28 ರಂದು ದಿನಾಂಕ ಮತ್ತು ಸಮಗ್ರ ಸಮಿತಿಗಳ ಘೋಷಣೆ- ಬ್ರಹ್ಮಕಲಶೋತ್ಸವ ಸೇವಾ ಕೈಂಕರ್ಯದ ಯಶಸ್ಸಿಗೆ ಪ್ರಾದೇಶಿಕ ಮಹಿಳಾ ಸಮಿತಿ ಅಸ್ತಿತ್ವಕ್ಕೆ

ಕುಂಬಳೆ: ಅತ್ಯುತ್ತರ ಕೇರಳದ ಗಡಿನಾಡು ಕಾಸರಗೋಡಿನ ಏಕೈಕ ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ 2027 ರ ಆರಂಭದ ಪಾದದಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಚಿಂತನೆ ಮತ್ತು ಸಿದ್ಧತೆಗಳು ಆರಂಭಗೊಂಡಿವೆ. ಇದರಂಗವಾಗಿ ಜೂ. 28 ರಂದು ಭಾನುವಾರ ಶ್ರೀ ಕ್ಷೇತ್ರದ ಸಭಾ ಭವನದಲ್ಲಿ ಎಡನೀರು, ಒಡಿಯೂರು, ಮಾಣಿಲ, ಕೊಂಡೆವೂರು ಸ್ವಾಮೀಜಿಗಳವರ ಸಮ್ಮುಖ, ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಕಲಶ ಉತ್ವದ ದಿನಾಂಕ ಮತ್ತು ವಿವಿಧ ಸಮಿತಿಗಳ ಘೋಷಣೆ ಮತ್ತು ವಿವಿಧ ಉಪ ಸಮಿತಿಗಳ ಘೋಷಣೆ ನಡೆಯಲಿದೆ. ಈ ಮೂಲಕ ಅನಂತಪುರ ಕ್ಷೇತ್ರ ಮಹಾ ಬ್ರಹ್ಮಕಲಶೋತ್ಸವಕ್ಕೆ ಔದ್ಯೋಗಿಕ ಚಾಲನೆ ದೊರೆಯಲಿದೆ. 


ಇದರ ಪೂರ್ವಭಾವಿ ಜೂನ್ 14 ರಂದು ಶ್ರೀ ಕ್ಷೇತ್ರದಲ್ಲಿ ಎಡನಾಡು- ಕಣ್ಣೂರು ಗ್ರಾಮದ ಮಹಿಳಾ ಪ್ರಮುಖರ ಸಭೆ ಸೇರಿ ಬ್ರಹ್ಮಕಲಶೋತ್ಸವದ ಸೇವಾ ಕೈಂಕರ್ಯಕ್ಕೆ ಮಹಿಳಾ ಸಮಿತಿ ರಚಿಸಲಾಯಿತು. 

ಮಹಿಳಾ ಸಮಿತಿ ಗೌರವಾಧ್ಯಕ್ಷೆಯಾಗಿ ಜಯಶ್ರೀ ಅನಂತಪುರ, ಅಧ್ಯಕ್ಷೆಯಾಗಿ ವಿಜಯಾ ಭಟ್ ಅನಂತಪುರ, ಪ್ರಧಾನ ಕಾರ್ಯದರ್ಶಿಯಾಗಿ ಅಜಿತಾ ಕೆ. ಅನಂತಪುರ

ಆಯ್ಕೆಗೊಂಡರು. ಉಳಿದಂತೆ ದೀಪಾ ರಾಜೇಶ್ ಕೂಡ್ಲು, ವಿಜಯಲಕ್ಷ್ಮಿ ಶಂನಾಡಿಗ, ಶಾಲಿನಿ ಕಣ್ಣೂರು, ಹರಿಣಿ ನಾಯಕ್ ಪೆರ್ಣೆ ವಿನೋದ ಅನಂತಪುರ, ಸುಜಾತ ಎ. ಎಸ್. ಕುಂಬ್ಳೆ, ಪದ್ಮಾವತಿ ಟೀಚರ್, ಸವಿತಾ ಎಂ. ಅನಂತಪುರ, ಅನ್ನಪೂರ್ಣ ಅಡಿಗ, ರೂಪಾ ಕಾವೇರಿಕಾನ (ಉಪಾಧ್ಯಕ್ಷೆಯರು) ಹಾಗೂ ಕಾರ್ಯದರ್ಶಿಗಳಾಗಿ  ಪುಷ್ಪಾ ಕಣ್ಣೂರು, ಬೇಬಿ ಕಾಮನಬಯಲು, ಹೇಮಲತಾ ನಾಯ್ಕಾಪು, ಲಕ್ಷ್ಮಿ ಚೋಡಾಲ, ಸುಜಾತ ಪೆರ್ಣೆ, ಸುಜಾತ ಮನೋಳಿತ್ತಾಯ, ಚೈತ್ರ ಅನಂತಪುರ ಆಯ್ಕೆಗೊಂಡರು. ಉಳಿದಂತೆ 32 ಮಂದಿಗಳ ಕಾರ್ಯಕಾರಿ  ಸಮಿತಿ ಒಳಗೊಂಡಂತೆ 51v ಮಂದಿಯ ಸಮಿತಿಗೆ ಸಭೆ ಅನುಮೋದನೆ ನೀಡಿತು.

ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಮಹಾಲಿಂಗೇಶ್ವರ ಭಟ್ ಪೆರ್ಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಪ್ಪಣ್ಣ ಮಾಸ್ತರ್, ಕೃಷ್ಣ ಆಳ್ವ ನಾವೂರು, ಬಾಬು ಮಾಸ್ತರ್ ಸಿದ್ಧಿಬೈಲು, ಸತ್ಯಶಂಕರ ಅನಂತಪುರ ಮೊದಲಾದವರು ಸಭೆಗೆ ನೇತೃತ್ವ ನೀಡಿದರು. ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ಮತ್ತು ಮಾರ್ಗದರ್ಶನ ಪಡೆಯಲು ವಿವಿಧ ಮಠಾಧೀಶರ, ಯತಿವರ್ಯರ ಹಾಗೂ ಧಾರ್ಮಿಕ-ಸಾಮಾಜಿಕ ಮುಖಂಡರ ಭೇಟಿ ಪ್ರಕ್ರಿಯೆಗಳು ಶ್ರೀಕ್ಷೇತ್ರ ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳಿಂದ ನಡೆಯುತ್ತಿದೆ.

ಜೂನ್ 28ರಂದು ಭಾನುವಾರ ಅನಂತಪುರ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಸಮಿತಿ ಘೋಷಣಾ ಸಭೆಗೆ ಆಸಕ್ತ ಬಾಂಧವರನ್ನೆಲ್ಲಾ ಸ್ವಾಗತಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries