ಸಮರಸ ಚಿತ್ರಸುದ್ದಿ: ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೈಲ್ ಇಂಡಿಯಾ ಲಿಮಿಟೆಡ್ ಮಂಗಳೂರು ಇವರಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ಪರಿಸರ ಉಳಿಸುವ ಪ್ರಜ್ಞೆಯನ್ನು ಮೂಡಿಸುವ ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿದರು. ಟ್ರಿನ್‍ಸನ್ ಸಿ ಲಾರೆನ್ಸ್ ಅಜಯಕುಮಾರ್, ಮೇಜರ್ ವಿಕಾಸ್ ಹಾಗೂ ಪ್ರೃಥ್ವಿರಾಜ್ ಶುಭ ಹಾರೈಸಿದರು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ಶುಭ ಹಾರೈಸಿದರು. ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಎಸ್. ಸ್ವಾಗತಿಸಿ, ಅಧ್ಯಾಪಿಕೆ ಸುಶ್ಮಿತ ಎಂ.ಎಆರ್ ವಂದಿಸಿದರು.

.jpg)
