HEALTH TIPS

ಸಿಯುಇಟಿ ಪರೀಕ್ಷೆಯಲ್ಲಿ ತಾಂತ್ರಿಕ ದೋಷ: ಪರೀಕ್ಷೆಯಿಂದ ವಂಚಿತರಾದ 3,765 ಅಭ್ಯರ್ಥಿಗಳು

ನವದೆಹಲಿ: ಶನಿವಾರ ನಡೆದ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ)ಯ ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ದೇಶಾದ್ಯಂತ 3,765 ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಾಧ್ಯವಾಗಲಿಲ್ಲ.

ತಾಂತ್ರಿಕ ವೈಫಲ್ಯದಿಂದಾಗಿ ಪರೀಕ್ಷೆಯು ಎರಡು ಗಂಟೆಗಳಿಗೂ ಅಧಿಕ ವಿಳಂಬದ ಬಳಿಕ ಆರಂಭಗೊಂಡಿತು ಹಾಗೂ ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದುಗೊಳಿಸಲಾಯಿತು.

ಪರೀಕ್ಷೆ ಎದುರಿಸಲು ಸಾಧ್ಯವಾಗದವರಿಗಾಗಿ ಇನ್ನೊಂದು ಪರೀಕ್ಷೆಯನ್ನು ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.

ಎನ್‌ಟಿಎ ಈ ಮೊದಲು, ಪರೀಕ್ಷೆ ತಡವಾಗಿ ಆರಂಭವಾದರೂ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂಬುದಾಗಿ ಹೇಳಿತ್ತು. ಆದರೆ, ತಮಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ ಎಂಬುದಾಗಿ ಸಂತ್ರಸ್ತ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಉತ್ತರಪ್ರದೇಶದ ನೋಯ್ಡಾಡದ ಸೆಕ್ಟರ್ 64ರಲ್ಲಿರುವ ಪರೀಕ್ಷಾ ಕೇಂದ್ರ 'ಆದರ್ಶ ಪರೀಕ್ಷಾ ಕೇಂದ್ರ'ದಲ್ಲಿ ಪರೀಕ್ಷೆಗೆ ಹಾಜರಾದ ಹೆಚ್ಚಿನ ವಿದ್ಯಾರ್ಥಿಗಳು, ತಮ್ಮ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ.

ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂಬುದಾಗಿ ಬಳಿಕ ಎನ್‌ಟಿಎ ಹೇಳಿದೆ.

''ಶನಿವಾರ ಬೆಳಗ್ಗೆ ಕೆಲವು ಪರೀಕ್ಷಾ ಕೇಂದ್ರಗಳು ತಾಂತ್ರಿಕ ಸಮಸ್ಯೆಯನ್ನು ಎದುರಿಸಿದವು. ಇದರಿಂದಾಗಿ ಬೆಳಗ್ಗಿನ ಪಾಳಿಯ ಪರೀಕ್ಷೆಯ ಆರಂಭ ವಿಳಂಬವಾಯಿತು. ಸಮಸ್ಯೆಯ ಮೂಲ ವಿಶ್ಲೇಷಿಸಿ ತಕ್ಷಣ ವರದಿ ಸಲ್ಲಿಸುವಂತೆ ತಾಂತ್ರಿಕ ಸೇವಾ ಪೂರೈಕೆದಾರ ಟಿಸಿಎಸ್ ಐಒಎನ್‌ಗೆ ಸೂಚಿಸಲಾಗಿದೆ'' ಎಂದು ಅಧಿಕೃತಿ ಹೇಳಿಕೆಯೊಂದರಲ್ಲಿ ಎನ್‌ಟಿಎ ತಿಳಿಸಿದೆ.

''ಸಮಸ್ಯೆಯನ್ನು ಸರಿಪಡಿಸಿದ ಬಳಿಕ, ಹೆಚ್ಚಿನ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದು ಬಯೋಮೆಟ್ರಿಕ್ ನೋಂದಣಿ ಮಾಡಿರುವ 3,765 ಅಭ್ಯರ್ಥಿಗಳು, ಪರೀಕ್ಷೆ ಪುನರಾರಂಭಗೊಳ್ಳುವ ಮೊದಲೇ ತೆರಳಿದ್ದಾರೆ'' ಎಂದು ಅದು ಹೇಳಿದೆ.

''ನೋಯ್ಡಾ ಸೆಕ್ಟರ್ 64ರ ಆದರ್ಶ್ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳಿಗೆ ಹೋಗುವಂತೆ ತಿಳಿಸಲಾಗಿದೆ ಹಾಗೂ ಎರಡನೇ ಪಾಳಿಯಲ್ಲಿ ಪರೀಕ್ಷೆ ನಡೆಸಲಾಗುವುದು ಎಂಬ ಮಾಹಿತಿಯನ್ನು ನೀಡಲಾಗಿಲ್ಲ. ಪರೀಕ್ಷೆ ಮತ್ತೆ ನಡೆದರೂ, 30 ಕಿ.ಮೀ. ದೂರದಿಂದ ಬಂದವರು ಹಾಗೂ ಅದಾಗಲೇ ಮನೆ ತಲುಪಿದವರು ಏನು ಮಾಡಬೇಕು?'' ಎಂದು ಎಕ್ಸ್ ಬಳಕೆದಾರ ತಾರಕ್ ಶರ್ಮಾ ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries