HEALTH TIPS

ಬಂದೇ ಬಿಡ್ತು ಎಥೆನಾಲ್ ನಲ್ಲಿ ಚಲಿಸುವ ಕಾರು, ಜೂನ್ 4 ರಂದು ಮಾರುಕಟ್ಟೆಗೆ ಲಗ್ಗೆ

ಮುಂಬ್ಯೆ:  ಮುಂಬರುವ ಜೂನ್ 5 ರಂದು ವಿಶ್ವದಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ (Maruti Suzuki) ವಿಶೇಷ ಸನ್ನಿವೇಶಕ್ಕೆ ನಾಂದಿ ಹಾಡಲು ಮುಂದಾಗಿದೆ. ವಿಶ್ವ ಪರಿಸರ ದಿನದ ಒಂದು ದಿನ ಮುಂಚಿತವಾಗಿ ಅಂದರೆ ಜೂನ್ 4 ರಂದು ದೇಶದ ಮೊಟ್ಟ ಮೊದಲ ಫ್ಲೆಕ್ಸ್ ಇಂಧನ ಬಳಸಿ(India's First Flex Fuel Car) ಸಂಚರಿಸುವ ಕಾರಿನ ಪ್ರದರ್ಶನ ಕಾಣಲಿದೆ.

ಈ ಕಾರನ್ನು ಪ್ರತಿಷ್ಠಿತ ಮಾರುತಿ ಸುಜುಕಿ ಹೊರತಂದಿದ್ದು, ಜೂನ್ 4 ರಂದು ಇದರ ಪ್ರದರ್ಶನವನ್ನು ಮಾಡಲಾಗುವುದು ಎಂದು ಸಂಸ್ಥೆ ದೃಢ ಪಡಿಸಿದೆ. ಬಹುನಿರೀಕ್ಷಿತ ಈ ಕಾರಿನ ಪ್ರದರ್ಶನ ಕಾರ್ಯಕ್ರಮವನ್ನು ದೆಹಲಿಯ ತಾಜ್ ಪ್ಯಾಲೇಸ್ ನಲ್ಲಿ ನಡೆಯಲಿದೆ. ಹಾಗೂ ಈ ಕಾರ್ಯಕ್ರಮಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತನ್ ಗಡ್ಕರಿ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗೀಕ ಅನಿಲ ಸಚಿವರಾದ ಹರ್ದಿಪ್ ಸಿಂಗ್ ಪುರಿ ಅವರು ಭಾಗವಹಿಸಲಿದ್ದಾರೆ.

E 100 ಕಾರಿನ ವಿಶೇಷತೆಗಳು

ಎಥಎನಾಲ್ ಇಂಧನ ಬಳಸಿ ಸಂಚರಿಸುವ ದೇಶದ ಮೊಟ್ಟ ಮೊದಲ ಕಾರನ್ನು ಮಾರುತಿ ಸುಜುಕಿ ಉತ್ಪಾದಿಸುತ್ತದೆ. ಮತ್ತು ಇದನ್ನು ವಿಶೇಷ ರೀತಿಯಲ್ಲಿ ತಯಾರಿಸಲಾಗಿದೆ. ಎಥೆನಾಲ್ ಇಂಧನ ಅಂದರೆ ಫ್ಲೆಕ್ಸ್ ಇಂಧನ ಕಾರನ್ನು ಬೆಂಬಲಿಸುವ ತಂತ್ರಜ್ಞಾನ ತಮ್ಮಲ್ಲಿದೆ ಎಂದು ಮಾರುತಿ ಹೇಳಿಕೊಂಡಿತ್ತು. ಅದೇ ರೀತಿಯಲ್ಲಿ ಈ ಕಾರನ್ನು ಇದೀಗ ಪ್ರದರ್ಶನಕ್ಕೆ ದಿನ ಫಿಕ್ಸ್ ಆಗಿದೆ.

ಈ ಕಾರು ವ್ಯಾಗನ್ ಆರ್ ಮತ್ತು ಫ್ರಾಂಕ್ಸ್ ಉತ್ಪಾದನಾ ಮಾದರಿಯ ವಿಶೇಷ ಎಥೆನಾಲ್ ಅಥವಾ ಫೆಕ್ಸ್ ಇಂಧನ ಆವೃತ್ತಿಯನ್ನು ದೇಶದಲ್ಲಿ ನಿರೀಕ್ಷಿಸಲಾಗಿದೆ. ಮಾರುತಿ ಸಂಸ್ಥೆ ಹೊರತಂದಿರುವ ವ್ಯಾಗನ್ ಆರ್ ಮತ್ತು ಫ್ರಾಂಕ್ಸ್ ಮಾದರಿ ಕಾರುಗಳು ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದ್ದು, ಜನಸಾಮಾನ್ಯರ ಅತ್ಯಂತ ಪ್ರೀತಿಯ ಕಾರಾಗಿದೆ.

ಕಳೆದ ಮೇ 23 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ ಅವರು ಮಾರುತಿ ಸುಜುಕಿಯ ಮುಂಬರುವ ಕಾರು 100 ಪ್ರತಿಶತ ಎಥನಾಲ್ (E100) ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಘೋಷಿಸಿದ್ದರು. ಅದೇ ರೀತಿಯಲ್ಲಿ ಇನ್ನಿತರ ಪ್ರತಿಷ್ಠಿತ ಕಂಪನಿಗಳಾದ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಟೊಯೋಟಾ ಸೇರಿದಂತೆ 12 ಕಂಪನಿಗಳು ಇಂತಹ ಫೆಕ್ಸ್ ಇಂಧನ ವಾಹನಗಳನ್ನು ಹೊಂದಿದೆ ಎಂದು ತಿಳಿಸಿದ್ದರು.

ಹಾಗೆಯೇ ತಮ್ಮ ಬಳಿ ಇರುವ ಟೊಯೋಟಾ ಇನ್ನೋವಾ ಕಳೆದ 18 ತಿಂಗಳಿಂದ ಬಯೋ ಇಥೆಾಲ್ ನಲ್ಲಿ ಚಲಿಸುತ್ತಿದೆ ಎಂದು ಗಡ್ಕರಿ ತಿಳಿಸಿದ್ದರು. ಹಾಗೆಯೇ ಮಾರುತಿಯ ಇ 100 ಎಥೆನಾಲ್ ವಾಹನವನ್ನು ವಿಶ್ವ ಪರಿಸರ ದಿನದಂದು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದರು.

ಇಂತಹ ವಾಹನಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತ ದೇಶದಲ್ಲಿ ಬಳಸುವುದರಿಂದ ದೇಶವು ಹೆಚ್ಚು ಸ್ವಾವಲಂಬಿಯಾಗಲಿದೆ ಮತ್ತು ಮಾಲೀನ್ಯ ಪ್ರಮಾಣ ಕಡಿಮೆಯಾಗಲಿದೆ, ಅದೇ ರೀತಿಯಲ್ಲಿ ಇಂಧನ ಆಮದು ಕಡಿಮೆಯಾಗಲಿದೆ, ಬಹುಮುಖ್ಯವಾಗಿ ಗ್ರಾಹಕರಿಗೆ ಅಗ್ಗದ ಇಂಧನ ಆಯ್ಕೆಯನ್ನು ಒದಗಿಸಲು ಸಹಾಯಮಾಡಿದಂತಾಗಿದೆ ಎಂದು ವಿವರಿಸಿದರು.

ಅಟೋ ಮೋಬೈಲ್ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಇದೀಗ ಮಾರುತಿ ಸುಜುಕಿ ತನ್ನ ಮೊದಲ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ನಂತರ, ಇನ್ನಿತರ ಕಾರು ಉತ್ಪಾದಕ ಸಂಸ್ಥೆಗಳು ಎಥೆನಾಲ್ ಇಂಧನ ಬಳಕೆಯ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಪೆಟ್ರೋಲ್ ಅಥವಾ ಡೀಸೆಲ್ ಅಥವಾ ವಿದ್ಯುತ್ ಬಳಕೆ ಮತ್ತು ಅವಲಂಬನೆ ಇದರಿಂದ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries