HEALTH TIPS

ದೆಹಲಿ ವಿಮಾನ ನಿಲ್ದಾಣದಲ್ಲಿ 4.83 ಕೋಟಿ ರೂ. ಮೌಲ್ಯದ ಗಾಂಜಾ ವಶ; ಓರ್ವನ ಬಂಧನ

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ಬ್ಯಾಂಕಾಕ್‌ ನಿಂದ ಆಗಮಿಸಿದ ಭಾರತೀಯ ಪ್ರಯಾಣಿಕನಿಂದ ಸುಮಾರು 4.83 ಕೋ.ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು (ಪೋಷಕಾಂಶಯುಕ್ತ ನೀರನ್ನು ಬಳಸಿ ಒಳಾಂಗಣದಲ್ಲಿ ಬೆಳೆಸುವ ಗಾಂಜಾ) ವಶಪಡಿಸಿಕೊಂಡಿದ್ದಾರೆ.

ಪ್ರಯಾಣಿಕ ಜೂನ್ 21ರಂದು ಬ್ಯಾಂಕಾಕ್‌ನಿಂದ ಏರ್ ಇಂಡಿಯಾ ವಿಮಾನ ಎಐ-2335ರ ಮೂಲಕ ಇಲ್ಲಿಗೆ ಆಗಮಿಸಿದ್ದ. ಸಂಶಯಾಸ್ಪದ ನಡವಳಿಕೆಯ ಹಿನ್ನೆಲೆಯಲ್ಲಿ ಆತನನ್ನು ಗ್ರೀನ್ ಚಾನೆಲ್ ದಾಟಿದ ಬಳಿಕ ತಡೆದು ತಪಾಸಣೆ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಆತನ ಸಾಮಗ್ರಿಗಳನ್ನು ಎಕ್ಸ್-ರೇ ತಪಾಸಣೆಗೆ ಒಳಪಡಿಸಿದಾಗ ಕೆಲವು ಸಂಶಯಾಸ್ಪದ ಚಿತ್ರಗಳು ಕಂಡುಬಂದವು. ಸಾಮಗ್ರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸುಮಾರು 13.84 ಕೆ.ಜಿ. ತೂಕದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಯಿತು.

ಸಾಮಗ್ರಿಗಳ ಹೆಚ್ಚಿನ ತಪಾಸಣೆಯಿಂದ ಒಟ್ಟು ಸುಮಾರು 13.480 ಕೆ.ಜಿ. ತೂಕದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಈ ಮಾದಕ ವಸ್ತುವಿನ ಅಂದಾಜು ಮೌಲ್ಯ ಸುಮಾರು 4.83 ಕೋಟಿ ರೂ. ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕನನ್ನು ಎನ್‌ಡಿಪಿಎಸ್ ಕಾಯ್ದೆ, 1985ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries