ತಿರುವನಂತಪುರಂ: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಅಗತ್ಯ ಪರಿಹಾರ ಕ್ರಮಗಳನ್ನು ಸೂಚಿಸಲು ಭೂತಂತ್ರಜ್ಞರನ್ನು ನೇಮಿಸಲು ನಿರ್ಧರಿಸಲಾಗಿದೆಯೆಂದು ಲೋಕೋಪಯೋಗಿ ಸಚಿವ ಪಿ.ಕೆ. ಬಶೀರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳು ಮತ್ತು ಜನರ ಕಳವಳಗಳನ್ನು ಪರಿಹರಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ತಿರುವನಂತಪುರಂನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಎಚ್.ಎ.ಐ) ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎನ್.ಎಚ್-66 ರ ವಿವಿಧ ವಿಭಾಗಗಳ ತಾಂತ್ರಿಕ ಸಮಸ್ಯೆಗಳನ್ನು ಅಧ್ಯಯನ ಮಾಡಲು ಎಂಟು ಭೂತಂತ್ರಜ್ಞ ಸಂಸ್ಥೆಗಳನ್ನು ಈಗಾಗಲೇ ನೇಮಿಸಲಾಗಿದೆ ಎಂದು ಓಊಂI ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಪ್ರೊ. ಜಿ.ವಿ.ಕೆ. ರಾವ್ (ಐಐಟಿ ದೆಹಲಿ) ಸಂಸ್ಥೆ ನಡೆಸುವ ಪ್ರಯೋಗಗಳಿಗೆ ಮತ್ತು ಟಿ. ಕೆ. ಸುಭಾಷ್ (ಐಐಟಿ ಪಾಲಕ್ಕಾಡ್) ಮುಂತಾದ ತಾಂತ್ರಿಕ ತಜ್ಞರು ನೇತೃತ್ವ ವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 66 ರ ಒಟ್ಟು 642 ಕಿ.ಮೀ.ಗಳಲ್ಲಿ 519 ಕಿ.ಮೀ. ಪೂರ್ಣಗೊಂಡಿದೆ ಎಂದು ಸಭೆ ನಿರ್ಣಯಿಸಿದೆ. ಉಳಿದ ಕಾಮಗಾರಿಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.
ಕೇರಳದಲ್ಲಿ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅವಕಾಶ ನೀಡುವ ಬಗ್ಗೆ ಶೀಘ್ರದಲ್ಲೇ ಕೇಂದ್ರ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುವುದು. ಭೂಸ್ವಾಧೀನ ಪ್ರಕರಣಗಳನ್ನು ಸಕಾಲಿಕವಾಗಿ ಪರಿಹರಿಸಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ವಿಶೇಷ ಮತ್ತು ಪೂರ್ಣಾವಧಿ ತಂಡಗಳನ್ನು ನೇಮಿಸುವುದಾಗಿ ಸಚಿವರು ಘೋಷಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪ್ರಾದೇಶಿಕ ಅಧಿಕಾರಿ ಕರ್ನಲ್ ಎ.ಕೆ. ಜಾನ್‍ಪಾಸ್, ಲೋಕೋಪಯೋಗಿ ಕಾರ್ಯದರ್ಶಿ ಡಾ. ಆದಿಲಾ ಅಬ್ದುಲ್ಲಾ, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿ.ಆರ್. ವಿನೋದ್, ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಮುಖ್ಯ ಎಂಜಿನಿಯರ್‍ಗಳು ಮತ್ತು ಇತರರು ಭಾಗವಹಿಸಿದ್ದರು.

