HEALTH TIPS

ಜನವರಿ 6 ಪಂಜಾಬಿ ಗಾಯಕ 'ದಿಲ್ಜಿತ್ ದೋಸಾಂಜ್ ಡೇ': ಲಾಸ್ ಏಂಜಲೀಸ್‌ ಸಿಟಿ ಕೌನ್ಸಿಲ್

 ಖ್ಯಾತ ಪಂಜಾಬಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ಅವರ ಜಾಗತಿಕ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ. ಅವರ ಸಾಧನೆಯ ಗೌರವಾರ್ಥ ಅಮೆರಿಕದ ಲಾಸ್ ಏಂಜಲೀಸ್‌ನ ಸಿಟಿ ಕೌನ್ಸಿಲ್ 2027 ಜನವರಿ 6 ಅನ್ನು 'ದಿಲ್ಜಿತ್ ದೋಸಾಂಜ್ ದಿನ' (Diljit Dosanjh Day) ಎಂದು ಅಧಿಕೃತವಾಗಿ ಘೋಷಿಸಿದೆ. ಪಂಜಾಬಿ ಸಂಗೀತವನ್ನು ಜಗತ್ತಿಗೆ ಪರಿಚಯಿಸಿದ ಅವರ ಕೊಡುಗೆಗಾಗಿ ಈ ಗೌರವ ನೀಡಲಾಗಿದೆ. 


ದಿಲ್ಜಿತ್ ಸದ್ಯ ತಮ್ಮ 'ಔರಾ ವರ್ಲ್ಡ್ ಟೂರ್ 2026' (Aura World Tour 2026) ಭಾಗವಾಗಿ ಅಮೆರಿಕ ಪ್ರವಾಸದಲ್ಲಿರುವಾಗಲೇ ಈ ಪ್ರಕಟಣೆ ಹೊರಬಿದ್ದಿದೆ.

ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್ ಈ ನಿರ್ಣಯವನ್ನು ಅಂಗೀಕರಿಸಿದೆ. ಭಾರತದ ಗಾಯಕ, ನಟ ದಿಲ್ಜಿತ್ ಅವರು ಪಂಜಾಬಿ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಅಮೆರಿಕದಲ್ಲಿ ದಕ್ಷಿಣ ಏಷ್ಯಾದ ಹೆಗ್ಗುರುತು ಮೂಡಿಸಲು ನೀಡಿದ ಮಹತ್ತರ ಕೊಡುಗೆಯನ್ನು ಗೌರವಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಿಟಿ ಕೌನ್ಸಿಲ್ ಸದಸ್ಯೆ ಮೋನಿಕಾ ರೊಡ್ರಿಗಸ್ ಅವರು ಈ ನಾಗರಿಕ ಗೌರವದ ಪ್ರಸ್ತಾಪವನ್ನು ಮಂಡಿಸಿದ್ದಾರೆ.

ಜನ್ಮದಿನದಂದೇ ವಿಶೇಷ ಗೌರವ:

ಜನವರಿ 6 ದಿಲ್ಜಿತ್ ಅವರ 43ನೇ ಜನ್ಮದಿನ. ಅಂದೇ ಈ ಗೌರವಕ್ಕೆ ಪಾತ್ರರಾಗಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ದಿಲ್ಜಿತ್, 'ಲಾಸ್ ಏಂಜಲೀಸ್‌ನಲ್ಲಿ ದಿಲ್ಜಿತ್ ದೋಸಾಂಜ್ ದಿನ!. ಸಿಟಿ ಕೌನ್ಸಿಲ್ ಇದನ್ನು ಅಧಿಕೃತವಾಗಿ ಘೋಷಿಸಿದೆ... ನಾನು ಏನು ಹೇಳಲಿ... ಇದನ್ನು ನಂಬಲು ಸಾಧ್ಯವಾಗುತಿಲ್ಲ. ಥ್ಯಾಂಕ್ ಯು ಸೋ ಮಚ್ ಲಾಸ್ ಏಂಜಲೀಸ್...' ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ತಿಳಿದ ಅಭಿಮಾನಿಗಳು, 'ಇದು ಜಗತ್ತಿನಾದ್ಯಂತ ಇರುವ ಪಂಜಾಬಿಗಳಿಗೆ ಹೆಮ್ಮೆಯ ಕ್ಷಣ' ಎಂದು ಕಾಮೆಂಟ್‌ ಮಾಡಿದ್ದಾರೆ.

ಒಂದೆಡೆ ದಿಲ್ಜಿತ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಗುತ್ತಿದ್ದರೆ, ಮತ್ತೊಂದೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಅವರ ಹೊಸ ಚಿತ್ರ 'ಮೇನ್‌ ವಾಪಸ್ ಆವುಂಗಾ' (Main Vaapas Aaunga) ಗಳಿಕೆಯಲ್ಲಿ ಹಿನ್ನಡೆ ಕಂಡಿದೆ.

ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿ ಭಾರತದಲ್ಲಿ ಕೇವಲ ₹12.25 ಕೋಟಿ ಗಳಿಸಿದೆ. ಸ್ಯಾಕಿನಿಲ್ಕ್ ವರದಿಯ ಪ್ರಕಾರ, ಸುಮಾರು ₹70 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರದ ಆರಂಭಿಕ ವಾರದ ಪ್ರದರ್ಶನ ನಿರಾಶಾದಾಯಕವಾಗಿದೆ. ಆದಾಗ್ಯೂ ಎರಡನೇ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಹೆಚ್ಚಾಗಬಹುದು ಎಂದು ನೀರೀಕ್ಷಿಸಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries