HEALTH TIPS

Bihar | ಬಂದೂಕು ತೋರಿಸಿ ಇಬ್ಬರು ಮಹಿಳೆಯರ ಅಪಹರಣ; 13 ಪುರುಷರಿಂದ ಸಾಮೂಹಿಕ ಅತ್ಯಾಚಾರ

ಪಾಟ್ನಾ: ಪಾಟ್ನಾದ ನೌಬತ್ಪುರ ಪ್ರದೇಶದಲ್ಲಿ ಸಂಗೀತ ಮತ್ತು ನೃತ್ಯ ತಂಡದ ಇಬ್ಬರು ಮಹಿಳೆಯರನ್ನು 13 ಪುರುಷರು ಬಂದೂಕು ತೋರಿಸಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಜೂನ್ 18ರಂದು ನೌಬತ್ಪುರ ಪ್ರದೇಶದಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದು ಫುಲ್ವಾರಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದರು.

13 ಮಂದಿ ಆರೋಪಿಗಳ ವಿರುದ್ಧ ಅದೇ ದಿನ ಝೀರೋ FIR ದಾಖಲಿಸಲಾಯಿತು ಹಾಗೂ ನಂತರ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಶುಕ್ರವಾರ ನೌಬತ್ಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು ಎಂದು ಅವರು ಹೇಳಿದರು.

ಆರೋಪಿಗಳ ಪೈಕಿ ಮೂವರನ್ನು ಮುನ್ನಾ ಕುಮಾರ್, ಸೂರಜ್ ಕುಮಾರ್ ಮತ್ತು ಭಾನು ಕುಮಾರ್ ಎಂದು ಗುರುತಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದರು. ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ (SIT)ವೊಂದನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಮೂಲತಃ ಜಾರ್ಖಂಡ್‌ ನ ಲತೇಹಾರ್ ಜಿಲ್ಲೆಯವರಾದ ಸಂತ್ರಸ್ತರು ಸೋದರಸಂಬಂಧಿಗಳಾಗಿದ್ದು, ಪಾಟ್ನಾದ ಮಿಥಾಪುರ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ನೌಬತ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದರಲ್ಲಿ 'ತಿಲಕ್' ಸಮಾರಂಭವೊಂದರಲ್ಲಿ ಕಾರ್ಯಕ್ರಮ ನೀಡಲು ಈ ಮಹಿಳೆಯರನ್ನು ಕರೆಯಿಸಲಾಗಿತ್ತು. ಈ ಕಾರ್ಯಕ್ರಮವನ್ನು ಆರೋಪಿಗಳ ಪೈಕಿ ಒಬ್ಬನಾಗಿರುವ ಮುನ್ನಾ ಕುಮಾರ್ ಆಯೋಜಿಸಿದ್ದನು.

ಆದರೆ, ಮಹಿಳೆಯರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆದೊಯ್ಯುವ ಬದಲಿಗೆ, ಕೆಲವು ಪುರುಷರು ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ರಾತ್ರಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಪ್ರತಿರೋಧ ಒಡ್ಡಿದಾಗ ಹೊಡೆದು, ಬೆದರಿಕೆ ಹಾಕಲಾಗಿತ್ತು ಎಂದು ಸಂತ್ರಸ್ತರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಮರುದಿನ ಬೆಳಗ್ಗೆ ಸಂತ್ರಸ್ತರನ್ನು ಒಯ್ಯುತ್ತಿದ್ದ ವಾಹನವು ಫುಲ್ವಾರಿ ಷರೀಫ್ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಪ್ರವೇಶಿಸಿದಾಗ, ಮಹಿಳೆಯರು ಜೋರಾಗಿ ಕಿರುಚಾಡಿದ್ದಾರೆ. ಆಗ ಅಲ್ಲಿದ್ದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries