HEALTH TIPS

ರಾಜ್ಯಸಭೆ ಚುನಾವಣೆ | ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ BJP

 ನವದೆಹಲಿ: 2026ರ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆ ಹಾಗೂ ಒಡಿಶಾದ ರಾಜ್ಯಸಭಾ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ (ಃಎP) ಗುರುವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಸಂಸತ್ತಿನ ಮೇಲ್ಮನೆಯಲ್ಲಿ ತನ್ನ ಪ್ರಾತಿನಿಧ್ಯವನ್ನು ಉಳಿಸಿಕೊಳ್ಳುವ ಹಾಗೂ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಕ್ಷವು ವಿವಿಧ ರಾಜ್ಯಗಳ ಅಭ್ಯರ್ಥಿಗಳನ್ನು ಘೋಷಿಸಿದೆ. 


ಮಧ್ಯಪ್ರದೇಶದಿಂದ ಪಂಜಾಬ್ ಃಎP ನಾಯಕ ತರುಣ್ ಚುಗ್ ಹಾಗೂ ರಜನೀಶ್ ಅಗರ್ವಾಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗಿದೆ. ಅರುಣಾಚಲ ಪ್ರದೇಶದಿಂದ ತೈ ಟಗಕ್ ಹಾಗೂ ಮಣಿಪುರದಿಂದ ಎ. ಶಾರದಾ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ.

ಗುಜರಾತ್ನ ನಾಲ್ಕು ಸ್ಥಾನಗಳಿಗೆ ರಾಜುಭಾಯ್ ಶುಕ್ಲಾ, ಮುಖೇಶ್ಭಾಯ್ ರಥ್ವಾ, ಮಾನ್ಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘ್ ಜಿ ಭಾಯ್ ಕನ್ಜಾರಿಯಾ ಅವರನ್ನು ಃಎP ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ರಾಜಸ್ಥಾನದ ಎರಡು ಸ್ಥಾನಗಳಿಗೆ ಡಾ. ಅಲ್ಕಾ ಗುರ್ಜರ್ ಹಾಗೂ ರಾಜ್ಯ ಃಎP ಮಾಜಿ ಅಧ್ಯಕ್ಷ ಡಾ. ಸತೀಶ್ ಪೂನಿಯಾ ಅವರಿಗೆ ಅವಕಾಶ ನೀಡಲಾಗಿದೆ.

ಒಡಿಶಾದ ರಾಜ್ಯಸಭಾ ಉಪಚುನಾವಣೆಗೆ ದೇಬಾಶಿಶ್ ಸಮಂತರಾಯ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಬಿಜು ಜನತಾದಳದ (ಬಿಜೆಡಿ) ಮಾಜಿ ಸದಸ್ಯರಾಗಿದ್ದ ಅವರು ಮೇ 25ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಈ ರಾಜ್ಯಗಳಲ್ಲಿ ಃಎPಗೆ ವಿಧಾನಸಭೆಗಳಲ್ಲಿ ಅನುಕೂಲಕರ ಸಂಖ್ಯಾಬಲ ಇರುವುದರಿಂದ ಪಕ್ಷದ ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವೆಂದು ಪರಿಗಣಿಸಲಾಗಿದೆ.

ಜೂನ್ 18ರಂದು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು, 10 ರಾಜ್ಯಗಳ 24 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದೇ ದಿನ ಮಹಾರಾಷ್ಟ್ರ ಮತ್ತು ತಮಿಳುನಾಡಿನ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆಯೂ ನಡೆಯಲಿದೆ.

ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕುತೂಹಲ ಮುಂದುವರಿದಿದೆ. ಈ ಎರಡೂ ರಾಜ್ಯಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿಲ್ಲ. ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಯನ್ನು ಇನ್ನೂ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ಮುಂದಿನ ಪಟ್ಟಿಯಲ್ಲಿ ಹೆಸರುಗಳು ಪ್ರಕಟವಾಗುವ ನಿರೀಕ್ಷೆಯಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries