HEALTH TIPS

'ಕಾಸರಗೋಡು ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ' ವತಿಯಿಂದ ಶಾಸಕರಿಗೆ ಅಭಿನಂದನೆ

ಮಂಜೇಶ್ವರ: ಮಂಜೇಶ್ವರ ಶಾಸಕರಾಗಿ ಆಯ್ಕೆಯಾಗಿರುವ ಎ.ಕೆ.ಎಂ. ಅಶ್ರಫ್ ಅವರನ್ನು 'ಕಾಸರಗೋಡು ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ' ವತಿಯಿಂದ ವರ್ಕಾಡಿಯ ಗಾಂಧಿ ನಗರದ ಎ.ಎಚ್. ಪ್ಯಾಲೇಸ್‍ನಲ್ಲಿ ಭಾನುವಾರ ಸನ್ಮಾನಿಸಲಾಯಿತು. ಸಂಘಟನೆಯ ಅಧ್ಯಕ್ಷ ಯೇಸು ಪ್ರಸಾದ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡು ಶಾಸಕರ ಜನಪರ ಕಾರ್ಯಗಳನ್ನು ಶ್ಲಾಘಿಸಿದರು. 


ಸನ್ಮಾನ ಸ್ವೀಕರಿಸಿದ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ, ಸಮಾಜದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿಗೆ ತಾನು ಬದ್ಧನಾಗಿದ್ದೇನೆ. ನಿಮ್ಮೆಲ್ಲರ ಈ ಪ್ರೀತಿ, ವಿಶ್ವಾಸ ಮತ್ತು ಸನ್ಮಾನವು ಮುಂದಿನ ದಿನಗಳಲ್ಲಿ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ನನಗೆ ದೊಡ್ಡ ಸ್ಫೂರ್ತಿಯನ್ನು ನೀಡಿದೆ. ಎಂದು ಹೇಳಿದರು 

ಈ ಕಾರ್ಯಕ್ರಮದಲ್ಲಿ ಕಯ್ಯಾರ್ ಚರ್ಚ್‍ನ ವಂದನೀಯ ಗುರು ವಿಶಾಲ್ ಮೋನಿಶ್, ವರ್ಕಾಡಿ ಚರ್ಚ್‍ನ ವಂದನೀಯ ಗುರು ಫ್ರಾನ್ಸಿಸ್ ಕ್ರಾಸ್ಟಾ, ಪೈವಳಿಕೆ ಪಂಚಾಯತಿ ಸದಸ್ಯೆ ಪ್ರಿನ್ಸಿಟ ಕಯ್ಯಾರ್, ವರ್ಕಾಡಿ ಪಂಚಾಯತಿ ಸದಸ್ಯೆ ಲೀನಾ ಟೆಲ್ಲಿಸ್ ಹಾಗೂ ನ್ಯಾಯವಾದಿ ಎಂ.ಎಸ್. ಥೋಮಸ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘಟನೆಯ ಕಾರ್ಯದರ್ಶಿ ನವೀನ್ ಮೊಂತೇರೋ ಮಂಜೇಶ್ವರ, ರೋನಿ ವರ್ಕಾಡಿ, ರಾಜು ಮಣಿಯಂಪಾರೆ, ಫ್ರಾನ್ಸಿಸ್ ತಲಪಾಡಿ, ಅರುಣ್ ಕ್ರಾಸ್ತ, ವಿಲ್ಫ್ರೆಡ್ ಮನೋಹರ್, ಡಾಲ್ಫಿ ಕುಂಬ್ಳೆ, ಗಾಡ್ವಿನ್, ವಿಲ್ಲಿಯಂ, ಪ್ರವೀಣ್, ಪ್ರಭು, ರಾಜೇಶ್ ಹಾಗೂ ಜೋಯ್ ಸಹಿತ ಹಲವು ಗಣ್ಯರು ಮತ್ತು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಯೇಸು ಪ್ರಸಾದ್ ಡಿಸೋಜ ಸ್ವಾಗತಿಸಿ ನವೀನ್ ಮೊಂತೆರೋ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries