ಮುಳ್ಳೇರಿಯ: ವಿದ್ಯಾಶ್ರೀ ಶಿಕ್ಷಣಕೇಂದ್ರದಲ್ಲಿ ಯೋಗಾಧ್ಯಾಪಿಕೆ ಲತಾರ ಮಾರ್ಗದರ್ಶನದಲ್ಲಿ ಭಾನುವಾರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಯೋಗದ ಮಹತ್ವ ಮತ್ತು ಪರಿಣಾಮಗಳ ಕುರಿತು ವಿವಿಧ ಭಾಷೆಗಳಲ್ಲಿ ಭಾಷಣಗಳ ಮೂಲಕ ಪ್ರಸ್ತುತಪಡಿಸಿದರು. ನಂತರ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಅಗ್ನಿವೀರ್ ಇಂಡಿಯನ್ ಆರ್ಮಿಗೆ ಆಯ್ಕೆಯಾದ ಅಜಯ್ ಮುಳ್ಳೇರಿಯ ಮತ್ತು ಸಂದೀಪ್ ಮೂಡಂಕುಲಮ್ ಇವರನ್ನು ಸನ್ಮಾನಿಸಲಾಯಿತು. ಕರಾಟೆ, ಕ್ರಿಕೆಟ್‍ಗಳಲ್ಲಿ ಬಹುಮಾನ ಪಡೆದ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಡಾ. ಶಿವರಾಯ ಭಟ್ ಉದ್ಘಾಟಿಸಿ ಯೋಗದಿಂದ ಮುಕ್ತಿ ಮತ್ತು ಅಷ್ಟಾಂಗ ಯೋಗ ಇತ್ಯಾದಿಗಳ ಕುರಿತು ವಿವರಿಸಿದರು. ವಿದ್ಯಾನಿಕೇತನದ ಕಾರ್ಯಕರ್ತ ಶಿವಶಂಕರ ನಾಯರ್ ಮತ್ತು ವಿದ್ಯಾನಿಕೇತನದ ಜಿಲ್ಲಾ ಯೋಗ ಪ್ರಮುಖ ಮಾಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಅಧ್ಯಕ್ಷ ಗಣೇಶ ವತ್ಸ, ಕಾರ್ಯದರ್ಶಿ ಸುರೇಶ್ ವಾಣಿನಗರ ಇತರ ಸದಸ್ಯರು, ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


.jpg)
