ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿಯ ನೀರ್ಚಾಲು 3ನೇ ವಾರ್ಡು ಉರ್ಮಿ ನಾಟೆಕಲ್ಲು ರಸ್ತೆ ಕಾಂಕ್ರೀಟು ರಸ್ತೆಯ ಉದ್ಘಾಟನೆ ಶನಿವಾರ ಜರಗಿತು. ಗ್ರಾಮ ಪಂಚಾಯಿತಿ ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಶಂಕರ ಡಿ. ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ಮುಂದಿಟ್ಟು ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಜನರು ಎಚ್ಚರ ವಹಿಸಬೇಕು. ರಸ್ತೆಯು ಅಭಿವೃದ್ಧಿಯಾದರೆ ಅದು ಆ ಊರಿನ ಸಮಗ್ರ ಶ್ರೇಯಕ್ಕೆ ಕಾರಣವಾಗುವುದು. ಮುಂದಿನ ದಿನಗಳಲ್ಲಿ ವಿವಿಧ ವಾರ್ಡುಗಳಲ್ಲಿರುವ ಕಳಪೆ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಸಿಡಿಎಸ್ ಅಧ್ಯಕ್ಷೆ ಸುಲೋಚನ, ಸ್ಥಳೀಯರಾದ ಸಾವಿತ್ರಿ, ಜೇಮ್ಸ್, ಆಗ್ನೆಲ್, ಪ್ರಜೇಶ್, ರಕ್ಷಿತ್ ಮೊದಲಾದವರು ಪಾಲ್ಗೊಂಡಿದ್ದರು. ಲೆಕ್ಸಿ ಥೋಮಸ್ ಸ್ವಾಗತಿಸಿದರು.

.jpg)
