HEALTH TIPS

ನಿಧಾನವಾಗಿ ನಡೆಯುವುದಕ್ಕೂ ಕಿವಿ ಸರಿಯಾಗಿ ಕೇಳಿಸದಿರುವುದಕ್ಕೂ ಸಂಬಂಧವಿದೆಯೇ?

ಬಹಳ ಮಂದಿ ಕೇಳುವ ಶಕ್ತಿ ಕಡಿಮೆಯಾಗುವುದು ಅಥವಾ ಕಿವಿ ಸರಿಯಾಗಿ ಕೇಳಿಸದಿರುವುದು (Hearing Loss)ಕೇವಲ ಕಿವಿಗೆ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಕೇಳುವ ಶಕ್ತಿ ಕಡಿಮೆಯಾಗುವುದು ದೇಹದ ಸಮತೋಲನ, ನಡೆಯುವ ವೇಗ ಮತ್ತು ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ.

ವಿಶೇಷವಾಗಿ ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೈದರಾಬಾದ್‌ನ ಯಶೋದ ಆಸ್ಪತ್ರೆಯ ಎಂಡೋಸ್ಕೋಪಿಕ್ ಇ ಎನ್ ಟಿ ಸ್ಪೆಷಲಿಸ್ಟ್ ಡಾ. ಕೆವಿಎಸ್‌ಎಸ್‌ಆರ್‌ಕೆ ಶಾಸ್ತ್ರಿ ಅವರು ಹೇಳುವ ಪ್ರಕಾರ, ಕಿವಿಯ ಒಳಭಾಗದಲ್ಲಿರುವ ಸಮತೋಲನ ವ್ಯವಸ್ಥೆ (Inner Ear Balance System) ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದ ಚಲನೆ ಮತ್ತು ಬ್ಯಾಲೆನ್ಸ್ ಮೇಲೆ ಪರಿಣಾಮ ಬೀಳುತ್ತದೆ ಎಂದಿದ್ದಾರೆ.

ಕೇಳುವ ಶಕ್ತಿ ಕಡಿಮೆಯಾದರೆ ಏನೆಲ್ಲಾ ಆಗುತ್ತದೆ?

ಸಮತೋಲನ ಕಳೆದುಕೊಳ್ಳುವ ಸಾಧ್ಯತೆ: ನಮ್ಮ ಒಳಕಿವಿಯಲ್ಲಿ ದೇಹದ ಸಮತೋಲನ ಕಾಪಾಡುವ ವಿಶೇಷ ವ್ಯವಸ್ಥೆ ಇರುತ್ತದೆ. ಕೇಳುವ ಶಕ್ತಿ ಕಡಿಮೆಯಾದಾಗ ಸುತ್ತಮುತ್ತಲಿನ ಪರಿಸರದ ಅರಿವು ಕಡಿಮೆಯಾಗುತ್ತದೆ. ಇದರಿಂದ ನಡೆಯುವಾಗ ತಡಕಾಡುವುದು, ಕೆಳಗೆ ಬೀಳುವ ಅಪಾಯ ಹೆಚ್ಚಾಗುತ್ತದೆ.

ಮೆದುಳಿನ ಮೇಲೆ ಹೆಚ್ಚುವರಿ ಒತ್ತಡ: ಸ್ಪಷ್ಟವಾಗಿ ಕೇಳಿಸದಿದ್ದರೆ ಎದುರಿನವರ ಮಾತು ಅರ್ಥಮಾಡಿಕೊಳ್ಳಲು ಮೆದುಳು ಹೆಚ್ಚು ಕೆಲಸ ಮಾಡಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ದಣಿವು ಉಂಟಾಗುತ್ತದೆ. ಕ್ರಮೇಣ ಇದು ಆತ್ಮವಿಶ್ವಾಸ ಮತ್ತು ದೈಹಿಕ ಚಟುವಟಿಕೆಗಳನ್ನೂ ಕಡಿಮೆ ಮಾಡುತ್ತದೆ.

ನಿಷ್ಕ್ರಿಯ ಜೀವನಶೈಲಿ: ಕೇಳುವ ಸಮಸ್ಯೆಯಿಂದ ಕೆಲವರು ಜನರು ಇರುವ ಕಡೆ ಹೋಗುವುದನ್ನೇ ನಿಲ್ಲಿಸುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸ್ನಾಯುಗಳು ಮತ್ತು ಸಂಧಿಗಳು ದುರ್ಬಲವಾಗಿ ನಡೆಯುವ ವೇಗ ನಿಧಾನಗೊಳ್ಳುತ್ತದೆ.

ನಡೆಯುವ ವೇಗವೂ ಆರೋಗ್ಯದ ಸೂಚನೆ:

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟು ವೇಗವಾಗಿ ನಡೆಯುತ್ತಾನೆ ಎಂಬುದು ಮೆದುಳು, ನರಮಂಡಲ, ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯ ಸೂಚಕವಾಗಿದೆ. ಸಂಶೋಧನೆಗಳ ಪ್ರಕಾರ, ಕೇಳುವ ಶಕ್ತಿ ಕಡಿಮೆಯಿರುವವರು ಸಾಮಾನ್ಯರಿಗಿಂತ ನಿಧಾನವಾಗಿ ನಡೆಯುವ ಸಾಧ್ಯತೆ ಹೆಚ್ಚು. ಜಾನ್ಸ್ ಹಾಪ್ಕಿನ್ಸ್ ಅಧ್ಯಯನದ ಪ್ರಕಾರ, ಸಣ್ಣ ಮಟ್ಟಿನ ಕೇಳುವ ಶಕ್ತಿ ಕುಂದಿದವರಲ್ಲಿಯೂ ಕೆಳಗೆ ಬೀಳುವ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ. ಕೇಳುವ ಶಕ್ತಿ ಇನ್ನಷ್ಟು ಕುಂದಿದಂತೆ ಈ ಅಪಾಯವೂ ಹೆಚ್ಚಾಗುತ್ತದೆ.

ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬೇಕು?

  • ನಿಯಮಿತವಾಗಿ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ
  • ಅಗತ್ಯವಿದ್ದರೆ ಹಿಯರಿಂಗ್ ಏಡ್ಸ್ ಬಳಸಿರಿ
  • ಹೆಚ್ಚು ಶಬ್ದ ಇರುವ ಸ್ಥಳಗಳಿಂದ ದೂರವಿರಿ
  • ದೈಹಿಕವಾಗಿ ಚುರುಕಾಗಿ ಇರಿ
  • ಸಮತೋಲನ ವ್ಯಾಯಾಮಗಳನ್ನು ಮಾಡಿ
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries