HEALTH TIPS

ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಅಗ್ರಸ್ಥಾನದಲ್ಲಿ ರಷ್ಯಾ

 ನವದೆಹಲಿ : ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ರಾಷ್ಟ್ರಗಳ ಪೈಕಿ ರಷ್ಯಾ ಜೂನ್‌ ತಿಂಗಳಿನಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ, ಇದೇ ಅವಧಿಯಲ್ಲಿ ಅಮೆರಿಕದಿಂದ ಕಚ್ಚಾ ತೈಲ ಆಮದು ಭಾರಿ ಪ್ರಮಾಣದಲ್ಲಿ ಇಳಿದಿದೆ ಎಂದು ಕೆಫ್ಲರ್ ವರದಿ ತಿಳಿಸಿದೆ. 


ರಷ್ಯಾದಿಂದ ಜೂನ್‌ ತಿಂಗಳ 19ರವರೆಗೆ ಭಾರತಕ್ಕೆ ಪ್ರತಿ ದಿನ 26.6 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು ಆಗಿದೆ.

ಮೇ ತಿಂಗಳಲ್ಲಿ ಅಲ್ಲಿಂದ 19.1 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ಆಮದಾಗಿತ್ತು.

ಅರಬ್‌ ಸಂಯುಕ್ತ ಸಂಸ್ಥಾನದಿಂದ (ಯುಇಎ) 6.36 ಲಕ್ಷ ಬ್ಯಾರಲ್ ಕಚ್ಚಾ ತೈಲ ಪ್ರತಿ ದಿನ ಆಮದಾಗಿದೆ. ಆದರೆ, ಮೇ ತಿಂಗಳಿನಲ್ಲಿ 6.44 ಲಕ್ಷ ಬ್ಯಾರಲ್ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಆಮದು ಪ್ರಮಾಣ ಅಲ್ಪ ಇಳಿದಿದೆ. ಸೌದಿ ಅರೇಬಿಯಾದಿಂದ 3.84 ಲಕ್ಷ ಬ್ಯಾರಲ್ ಮತ್ತು ವೆನೆಜುವೆಲಾದಿಂದ 2.09 ಲಕ್ಷ ಬ್ಯಾರಲ್ ತೈಲ ನಿತ್ಯ ಆಮದಾಗಿದೆ.

ಮೇ ತಿಂಗಳಿನಲ್ಲಿ ಭಾರತಕ್ಕೆ ಅಮೆರಿಕಾದಿಂದ ಪ್ರತಿನಿತ್ಯ 2.52 ಲಕ್ಷ ಬ್ಯಾರಲ್ ಆಮದಾಗಿತ್ತು. ಆದರೆ, ಜೂನ್‌ನಲ್ಲಿ 91 ಸಾವಿರಕ್ಕೆ ಕುಸಿದಿದೆ ಎಂದು ತಿಳಿಸಿದೆ.

ಭಾರತವು, ಜಗತ್ತಿನ ಮೂರನೇ ಅತಿದೊಡ್ಡ ಇಂಧನ ಆಮದು ರಾಷ್ಟ್ರ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಆದರೆ, ಕಳೆದ ವಾರ ಅಮೆರಿಕ ಮತ್ತು ಇರಾನ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಸಂಚಾರ ಆರಂಭವಾಗಿದೆ. ಆದರೆ, ಕದನ ವಿರಾಮದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.

'ಹೊರ್ಮುಜ್ ಜಲಸಂಧಿಯು ಮತ್ತೆ ಸಂಚಾರಕ್ಕೆ ಮುಕ್ತವಾಗುವುದರಿಂದ ತ್ವರಿತವಾಗಿ ಭಾರತಕ್ಕೆ ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಕಚ್ಚಾ ತೈಲ ಆಮದಾಗುವ ನಿರೀಕ್ಷೆ ಇದೆ. ಅಲ್ಲದೆ, ಭಾರತವು ಇಂಧನ ಪೂರೈಕೆ ಮೂಲಗಳನ್ನು ಹೆಚ್ಚಿಸಿಕೊಂಡಿದ್ದು, ಸಹಜ ಸ್ಥಿತಿಗೆ ಬರಲಿದೆ' ಎಂದು ಕೆಫ್ಲರ್‌ನ ಹಿರಿಯ ಅಧಿಕಾರಿ ಸುಮಿತ್ ರಿಟೋಲಿಯಾ ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries