HEALTH TIPS

ನಿಮ್ಮ ಗೂಗಲ್‌ ಖಾತೆಯ ಸುರಕ್ಷತೆಗಾಗಿ Two Factor Authentication ಆಕ್ಟಿವ್‌ ಮಾಡುವುದು ಹೇಗೆ?

 ಪ್ರಸ್ತುತ ದಿನಗಳಲ್ಲಿ ಜಿ-ಮೇಲ್‌, ಗೂಗಲ್‌ ಡ್ರೈವ್‌, ಗೂಗಲ್‌ ಫೋಟೋಸ್, ಯೂಟ್ಯೂಬ್‌ ಸೇರಿದಂತೆ ಹಲವು ಪ್ರಮುಖ ಸೇವೆಗಳನ್ನು ಬಳಸಲು ಗೂಗಲ್‌ ಅಕೌಂಟ್‌ ಅಗತ್ಯ ಹಾಗೂ ಅವಶ್ಯಕವಾಗಿದೆ. ಈ ಖಾತೆಯಲ್ಲಿ ನಮ್ಮ ವೈಯಕ್ತಿಕ ಮಾಹಿತಿ, ಫೋಟೋಗಳು, ದಾಖಲೆಗಳು ಮತ್ತು ಇಮೇಲ್‌ಗಳು ಸಂಗ್ರಹವಾಗಿರುತ್ತವೆ. 


ಆದರೆ ಸೈಬರ್ ದಾಳಿಗಳು ಮತ್ತು ಹ್ಯಾಕಿಂಗ್ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ ಪಾಸ್‌ವರ್ಡ್‌ ಇಟ್ಟುಕೊಳ್ಳುವುದು ಸಾಕಾಗುವುದಿಲ್ಲ. ನಿಮ್ಮ ಗೂಗಲ್‌ ಅಕೌಂಟ್‌ಗೆ ಹೆಚ್ಚುವರಿ ಸೆಕ್ಯುರಿಟಿ ಒದಗಿಸಲು Google Two Factor Authentication (2FA) ಅಥವಾ 2 Step Verification ಸೌಲಭ್ಯವನ್ನು ನೀಡುತ್ತದೆ. ಇದನ್ನು ಸಕ್ರಿಯಗೊಳಿಸಿದರೆ ಪಾಸ್‌ವರ್ಡ್‌ ಜೊತೆಗೆ ಮತ್ತೊಂದು ಪರಿಶೀಲನಾ ಹಂತವೂ ಅಗತ್ಯವಾಗುತ್ತದೆ. ಹಾಗಾದರೆ ಗೂಗಲ್‌ ಅಕೌಂಟ್ ನಲ್ಲಿ ಟು ಫ್ಯಾಕ್ಟರ್ ಅಥೆಂಟಿಕೇಶನ್ ಅನ್ನು ಹೇಗೆ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ.

ಏನಿದು Two Factor Authentication

ಸಾಮಾನ್ಯವಾಗಿ ಗೂಗಲ್‌ ಅಕೌಂಟ್‌ಗೆ ಲಾಗಿನ್ ಆಗುವಾಗ ನಿಮ್ಮ ಪಾಸ್‌ವರ್ಡ್‌ ಮಾತ್ರ ಸಾಕಾಗುತ್ತದೆ. ಆದರೆ 2FA ಸಕ್ರಿಯಗೊಳಿಸಿದರೆ ಪಾಸ್‌ವರ್ಡ್‌ ಜೊತೆಗೆ ಮತ್ತೊಂದು ಪರಿಶೀಲನಾ ಹಂತವೂ ಅಗತ್ಯವಾಗುತ್ತದೆ. ಉದಾಹರಣೆಗೆ ನಿಮ್ಮ ಮೊಬೈಲ್‌ಗೆ ಬರುವ OTP ಅಥವಾ Google Prompt ಅನ್ನು ದೃಢೀಕರಿಸಬೇಕಾಗುತ್ತದೆ. ಇದರಿಂದ ನಿಮ್ಮ ಪಾಸ್‌ವರ್ಡ್‌ ಯಾರಿಗಾದರೂ ಗೊತ್ತಾದರೂ ಅವರು ಸುಲಭವಾಗಿ ನಿಮ್ಮ ಖಾತೆಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಟು ಫ್ಯಾಕ್ಟರ್ ಅಥೆಂಟಿಕೇಶನ್ ಆಯ್ಕೆ ಆಕ್ಟಿವ್ ಮಾಡಲು ಹೀಗೆ ಮಾಡಿ

ಹಂತ 1. ಮೊದಲು ನಿಮ್ಮ ಗೂಗಲ್‌ ಅಕೌಂಟ್‌ಗೆ ಲಾಗಿನ್ ಆಗಿ.

ಹಂತ 2. Account Settings ಅಥವಾ Manage Your Google Account ಆಯ್ಕೆಯನ್ನು ತೆರೆಯಿರಿ.

ಹಂತ 3. ಎಡಭಾಗದಲ್ಲಿರುವ Security ವಿಭಾಗಕ್ಕೆ ಹೋಗಿ.

ಹಂತ 4. ಅಲ್ಲಿ 2-Step Verification ಎಂಬ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 5. Google ನಿಮ್ಮ ಗುರುತನ್ನು ದೃಢೀಕರಿಸಲು ಪಾಸ್‌ವರ್ಡ್‌ ಅನ್ನು ಮತ್ತೆ ಕೇಳಬಹುದು.

ಹಂತ 6. ನಂತರ Get Started ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 7. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ಪರಿಶೀಲಿಸಿ.

ಹಂತ 8. ಪರಿಶೀಲನೆ ಪೂರ್ಣಗೊಂಡ ಬಳಿಕ Turn On ಆಯ್ಕೆಯನ್ನು ಒತ್ತಿ.

ಹೆಚ್ಚುವರಿ ಸೆಕ್ಯುರಿಟಿ ಆಯ್ಕೆಗಳು

ಗೂಗಲ್‌ ಕೇವಲ SMS OTP ಮಾತ್ರವಲ್ಲದೆ ಗೂಗಲ್‌ ಅಥೆಂಟಿಕೇಶನ್ ಆಪ್‌, Security Key ಹಾಗೂ Google Prompt ಮುಂತಾದ ಹಲವು ಸುರಕ್ಷಿತ ಆಯ್ಕೆಗಳನ್ನೂ ನೀಡುತ್ತದೆ. ತಂತ್ರಜ್ಞಾನದಲ್ಲಿ ಹೆಚ್ಚು ಭದ್ರತೆ ಬಯಸುವವರು ಅಥೆಂಟಿಕೇಶನ್ ಆಪ್‌ ಬಳಸುವುದು ಉತ್ತಮ.

2FA ಯಾಕೆ ಬಳಕೆ ಮಾಡಬೇಕು?

ಸೈಬರ್ ವಂಚನೆ ಮತ್ತು ಹ್ಯಾಕಿಂಗ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪಾಸ್‌ವರ್ಡ್‌ ಕಳುವಾದರೂ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಟು ಫ್ಯಾಕ್ಟರ್ ಅಥೆಂಟಿಕೇಶನ್ ನೆರವು ಮಾಡುತ್ತದೆ. ಕೆಲವೇ ನಿಮಿಷಗಳಲ್ಲಿ ಇದನ್ನು ಸಕ್ರಿಯಗೊಳಿಸಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ, ಇಮೇಲ್‌ಗಳು ಹಾಗೂ ದಾಖಲೆಗಳಿಗೆ ಹೆಚ್ಚುವರಿ ರಕ್ಷಣೆ ದೊರೆಯುತ್ತದೆ.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries