ಕಾಸರಗೋಡು: ಬಿಲ್ಲವ ಸೇವಾ ಸಂಘ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಕರಂದಕ್ಕಾಡ್ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಲ್‍ಕೆಜಿಯಿಂದ ತೊಡಗಿ, ಪ್ಲಸ್‍ಟು ವರೆಗಿನ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.
ನಿವೃತ್ತ ಡೆಪ್ಯೂಟಿ ತಹಸೀಲ್ದಾರ್ ಚಂದ್ರಕಲಾ ಸಸಿಹಿತ್ಲು ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿಗಳ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಬಿಲ್ಲವ ಸಂಘದ ಅಧ್ಯಕ್ಷ ರಘು ಕೆ ಮೀಪುಗುರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಿಂದ ಸ್ವಾವಲಂಬಿಗಳಾಗುವ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ತಿಳಿಸಿದರು. ನಗರ ಸಭಾ ಸದಸ್ಯ ಹರೀಶ್ ಕೆ ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗೌರವಧ್ಯಕ್ಷ ಎ ಕೇಶವ, ಮಾಜಿ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಬಿಲ್ಲವ ಮಹಾ ಮಂಡಳಿ ಸದಸ್ಯ ಸುಕಿರ್ತಿ ವರ್ಮಾ, ಶಮ್ಮಿ ಕುಮಾರ್, ಕಮಲಾಕ್ಷ ಸೂರ್ಲು, ರೋಹಿಣಿ, ಅಶೋಕ್ ಬೀರಂತಬೈಲ್, ಸಂತೋಷ್, ಸತೀಶ್, ಮೈಂದಪ್ಪ, ಇನ್ನಿತರರು ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸ್ವಾಗತಿಸಿ ಕಮಲಾಕ್ಷ ಸೂರ್ಲು ವಂದಿಸಿದರು, ಪ್ರೇಮ್ ಜಿತ್ ಕಾರ್ಯಕ್ರಮ ನಿರೂಪಿಸಿದರು.



