ಮಂಜೇಶ್ವರ: ಯುವಕನೊಂದಿಗೆ ನಿಂತಿರುವ ಪೋಟೋವನ್ನು ಪತಿಯ ಫೇಸ್ ಬುಕ್ ಖಾತೆ ಹಾಗೂ ಇನ್‍ಸ್ಟಾಗ್ರಾಂಗೆ ಕಳುಹಿಸಿಕೊಟ್ಟು, ಪತಿ ಹಾಗೂ ಮಗುವನ್ನು ಕೊಲ್ಲುವುದಾಗಿ ಫೆÇೀನ್ ಮೂಲಕ ಬೆದರಿಕೆಯೊಡ್ಡಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರು ನಿವಾಸಿ 37ರ ಹರೆಯದ ಮಹಿಳೆ ನೀಡಿದ ದೂರಿನನ್ವಯ ಕುಂಜತ್ತೂರು ನಿವಾಸಿ ಇಬ್ರಾಹಿಂ ಖಲೀಲ್ (32) ಎಂಬಾತನ ವಿರುದ್ಧ ಈ ಕೇಸು ದಾಖಲಾಗಿದೆ. ಮೇ 29ರಂದು ಮಧ್ಯಾಹ್ನ 12ಕ್ಕೆ ಹಾಗೂ 30ರಂದು ಬೆಳಿಗ್ಗೆ 10.44ರ ಮಧ್ಯೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರದಾತೆ ಗೃಹಿಣಿ ಹಾಗೂ ಇಬ್ರಾಹಿಂ ಖಲೀಲ್ ತನ್ನ ಫೋಟೋವನ್ನು ಆತನೊಂದಿಗೆ ಜೋಡಿಸಿ, ನನ್ನ ಪತಿಗೆ ಕಳುಹಿಸಿPಕೊಟ್ಟಿರುವುದಲ್ಲದೆ, ಸೋಶ್ಯಲ್ ಮೀಡಿಯಾ ಮೂಲಕ ಕೆಟ್ಟ ರೀತಿಯಲ್ಲಿ ಪ್ರಚಾರಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

