ಕಾಸರಗೋಡು: ಜಿಲ್ಲಾ ಪಂಚಾಯತಿ ವತಿಯಿಂದ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಆಯೋಜಿಸಲಾಯಿಒತು. ಶ್ರೀಗಂಧದ ಮರದ ಮೇಲೆ ಅಕ್ಷರಗಳನ್ನು ಬರೆಯುವುದರೊಂದಿಗೆ, ಬಲೂನುಗಳಿಂದ ಅಲಂಕರಿಸಲ್ಪಟ್ಟ ಶಾಲಾ ಅಂಗಳದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ವಿತರಿಸಿ, ಜಿಲ್ಲಾ ಮಟ್ಟದ ಶಾಲಾ ಪ್ರವೇಶ ಮತ್ತು ವಿಜಯೋತ್ಸವವನ್ನು ಸೋಮವಾರ ಆಚರಿಸಲಾಯಿತು.
ಹೊಸ ಶೈಕ್ಷಣಿಕ ವರ್ಷಕ್ಕೆ ಪ್ರವೇಶಿಸುವ ಪುಟಾಣಿಗಳನ್ನು ಸ್ವಾಗತಿಸುವುದರ ಜೊತೆಗೆ, ಹೆಚ್ಚಿನ ಯಶಸ್ಸನ್ನು ಸಾಧಿಸಿದ ಶಾಲೆ ಮತ್ತು ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಪ್ರವೇಶೋತ್ಸವ ಸಮಾರಂಭದ ಉದ್ಘಾಟನೆಯನ್ನು ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು.
ಈ ವರ್ಷದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವುದರೊಂದಿಗೆ ಎಲ್ಲರೂ ಉತ್ತೀರ್ಣರಾದ ಜಿಲ್ಲೆಯ ಅತ್ಯುತ್ತಮ ಸರ್ಕಾರಿ ಶಾಲೆಗಾಗಿ ಇರುವ ಜಿಲ್ಲಾ ಪಂಚಾಯಿತಿ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಪ್ರದಾನ ಮಾಡಿದರು. ಪ್ಲಸ್ ಟು ಪರೀಕ್ಷೆಯಲ್ಲಿಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳನ್ನು ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಅಭಿನಂದಿಸಿದರು. ನಂತರ, ಹೊಸ ವಿದ್ಯಾರ್ಥಿಗಳಿಗೆ ಕಲಿಕೋಪಕರಣದ ಕಿಟ್‍ಗಳನ್ನು ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು ವಿತರಿಸಿದರು. ಶಾಲಾ ಮಕ್ಕಳು ಸ್ವಾಗತ ನೃತ್ಯ ಪ್ರದರ್ಶಿಸಿದರು. ಪ್ರಸಿದ್ಧ ನಾಟಕ ಮತ್ತು ಜಾನಪದ ಗಾಯಕ ಸತೀಶನ್ ವೇಲುತ್ತೋಳಿ ಮಕ್ಕಳೊಂದಿಗೆ ಸಂವಾದ ನಡೆಸಿದರು
ಜಿಪಂ ಸದಸ್ಯ ಓಕ್ಲೋವ್ ಕೃಷ್ಣನ್ , ಬ್ಲಾಕ್ ಪಂಚಾಯತ್ ಸದಸ್ಯೆ ಪರಕೋಲ್ ರಾಜನ್, ಗ್ರಾಮ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್. ಟಿ. ಶ್ಯಾಮಲ, ಎಸ್‍ಎಸ್‍ಕೆ ಜಿಲ್ಲಾ ಸಂಯೋಜಕ ಬಿಜುರಾಜ್ ಎಂ.ಎಸ್. ವಿದ್ಯಾಕಿರಣಂ ಜಿಲ್ಲಾ ಸಂಯೋಜಕಪಿ.ಪ್ರಕಾಶನ ಬಿಪಿಸಿ ಶೈಜು ಬೀರಿಕುಲಂ ಶಾಲೆಯ ಎಚ್.ಎಂ (ಎಚ್.ಎಂ) ಸುನೀಲಕುಮಾರ್ ಎಂ, ಪಿಟಿಎ ಅಧ್ಯಕ್ಷ ಪಿ.ಮನೋಹರನ್ ಎನ್‍ಎಂಸಿ ಅಧ್ಯಕ್ಷ ಕೆ.ಸತ್ಯನ್ ಎಂಪಿಟಿಎ ಅಧ್ಯಕ್ಷೆ ಧನ್ಯ ಪಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕುಮಾರನ್, ಆಚರಣಾ ಸಮಿತಿ ಸಂಚಾಲಕ ಕೆ.ಕೆ.ಶಶಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸೀಮಾ ಕೆ.ಟಿ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಸುನೀಲ್ ಕುಮಾರ ಪಿ.ವಿ ವಂದಿಸಿದರು.



