ಕಾಸರಗೋಡು: ಕೇರಳ ರಸ್ತೆ ನಿಧಿ ಮಂಡಳಿ (ಕೆಆರ್‍ಎಫ್‍ಬಿ)ಅಧೀನದ 'ಕಿಫ್‍ಬಿ' ಯೋಜನೆಯನ್ವಯ ನಿರ್ಮಾಣ ಹಂತದಲ್ಲಿರುವ ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕ ರಸ್ತೆಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ವರೆಗೆ ನಡೆಯಲಿರುವ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಚೆರ್ಕಳದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ.
ಕಾಸರಗೋಡು ಕಡೆಯಿಂದ ಆಗಮಿಸುವ ವಾಹನಗಳು ಚೆರ್ಕಳ ಪೇಟೆಗೆ ಆಗಮಿಸಿ, ಇಲ್ಲಿಂದ ಚೆರ್ಕಳ ಹೊಸ ಬಸ್ ನಿಲ್ದಾಣದ ಮೂಲಕ ಜಾಲ್ಸೂರು ರಸ್ತೆ ಮೂಲಕ ಸಾಗಿ, ಬದಿಯಡ್ಕ ರಸ್ತೆ ಸಂಪರ್ಕಿಸಿ ಪ್ರಯಾಣ ಮುಂದುವರಿಸಬೇಕು.
ಬದಿಯಡ್ಕ ಮತ್ತು ಮುಳ್ಳೇರಿಯ ಪ್ರದೇಶಗಳಿಂದ ಬರುವ ವಾಹನಗಳು ಚೆರ್ಕಳದ ಹೊಸ ಬಸ್ ನಿಲ್ದಾಣದ ಮೂಲಕ ಸಂಚರಿಸಿ ಚೆರ್ಕಳ ಪೇಟೆ ಮೂಲಕ ಕಾಸರಗೋಡಿಗೆ ಸಂಚರಿಸಬೇಕು ಎಂದು ಕೇರಳ ರಸ್ತೆ ನಿಧಿ ಮಂಡಳಿ (ಕೆಆರ್‍ಎಫ್‍ಬಿ-ಪಿಎಂಯು) ಕಾಸರಗೋಡು ವಿಭಾಗದ ಸಹಾಯಕ ಎಂಜಿನಿಯರ್ ದಿಲೀಪ್ ಪಿ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



