HEALTH TIPS

ವಾಚನ ಮಾಸಾಚರಣೆ: ಜಿಲ್ಲಾ ಮಟ್ಟದ ಉದ್ಘಾಟನೆ ಇಂದು

ಕಾಸರಗೋಡು: ಜಿಲ್ಲಾ ಮಾಹಿತಿ ಕಚೇರಿಯ ನೇತೃತ್ವದಲ್ಲಿ ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ವಾಚನ ಮಾಸಾಚರಣೆ ಮತ್ತು ಪಿ.ಎನ್. ಪಣಿಕ್ಕರ್ ಸ್ಮಾರಕದ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು(ಜೂನ್ 19) ಬೆಳಿಗ್ಗೆ 10.30 ಕ್ಕೆ ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಹಾಬ್ ತಂಙಳ್ ಮೆಮೋರಿಯಲ್ ಪೆವಿಲಿಯನ್‍ನಲ್ಲಿ ನಡೆಯಲಿದೆ. 




ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚೆಂಗಳ ಪಂಚಾಯತ್ ಅಧ್ಯಕ್ಷ ವಸಂತ ಅಜಕ್ಕೋಡ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ವಾಚನ ದಿನದ ಸಂದೇಶ ನೀಡಲಿದ್ದಾರೆ. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಕುಂಞÂ್ಞ ಚೆರ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರೊ. ಕೆ.ಪಿ.ಜಯರಾಜನ್ ಪಿ.ಎನ್. ಪಣಿಕ್ಕರ್ ಸ್ಮಾರಕ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಪಿ.ಸವಿತಾ ವಾಚನ ದಿನದ ಪ್ರತಿಜ್ಞೆಯನ್ನು ಬೋಧಿಸುವರು. ಡಾ. ಸಂತೋಷ್ ಪನಾಯಲ್ ಸಾಂಸ್ಕøತಿಕ ಉಪನ್ಯಾಸ ನೀಡಲಿದ್ದಾರೆ. ಪ್ರಭಾರ ಪ್ರಾಂಶುಪಾಲ ಎಂ. ರಘುನಾಥ್, ಮುಖ್ಯೋಪಾಧ್ಯಾಯಿನಿ ಸಿ.ವಿ. ಸುಬೈದಾ, ಸಾರ್ವಜನಿಕ ಪ್ರತಿನಿಧಿಗಳು, ಶಾಲಾ ಅಧಿಕಾರಿಗಳು, ಮಾಹಿತಿ ಕಚೇರಿ ಸಿಬ್ಬಂದಿ, ವಿದ್ಯಾರ್ಥಿಗಳು ಮುಂತಾದವರು ಭಾಗವಹಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries