HEALTH TIPS

ತಾಳ್ಮೆಯಿಂದಿರಿ, ವದಂತಿಗಳಿಗೆ ಕಿವಿ ಕೊಡದಿರಿ: ನೀಟ್ ಆಕಾಂಕ್ಷಿಗಳಿಗೆ ಎನ್‌ಟಿಎ

ನವದೆಹಲಿ: 'ತಾಳ್ಮೆಯಿಂದಿರಿ, ವದಂತಿಗಳಿಗೆ ಕಿವಿ ಕೊಡಬಾರದು' ಎಂದು ನೀಟ್‌-ಯುಜಿ ಮರು ಪರೀಕ್ಷೆಗೆ ಸಿದ್ಧರಾಗುತ್ತಿರುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲಹೆಯನ್ನು ನೀಡಿದೆ. 

ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಈ ಕುರಿತು ವಿದ್ಯಾರ್ಥಿಗಳಿಗೆ ಸಂದೇಶವನ್ನು ಹಂಚಿಕೊಂಡಿದೆ.

'ನೀಟ್ ಯುಜಿ 2026 ಪರೀಕ್ಷೆಗೆ ಕೇವಲ ಮೂರು ದಿಗಳಷ್ಟೇ ಬಾಕಿ ಇದೆ. ಪ್ರತಿಯೊಬ್ಬ ಆಕಾಂಕ್ಷಿಯೂ ಕಷ್ಟಪಟ್ಟು ಸಿದ್ದತೆ ನಡೆಸಿದ್ದೀರಿ. ಈಗ ನಿಮ್ಮ ಪ್ರಯತ್ನದ ಮೇಲೆ ನಂಬಿಕೆಯನ್ನಿಡುವ ಸಮಯವಾಗಿದೆ. ತಾಳ್ಮೆಯಿಂದಿರಿ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ. ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ' ಎಂದು ಸಲಹೆ ನೀಡಿದೆ.

'ಪರೀಕ್ಷೆಯನ್ನು ನಿಗದಿಪಡಿಸಿದಂತೆ ನಡೆಸಲಾಗುವುದು. ದಯವಿಟ್ಟು ಪರೀಕ್ಷೆ ಮುಂದೂಡಿಕೆಯ ವದಂತಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿನ ಬರುವ ಅಪಪ್ರಚಾರಗಳಿಂದ ವಿಚರಿತರಾಗಬೇಡಿ. ಎನ್‌ಟಿಎಯಿಂದ ಮಾತ್ರ ಅಧಿಕೃತ ಮಾಹಿತಿಯನ್ನು ಪಡೆದುಕೊಳ್ಳಿ' ಎಂದು ಸೂಚಿಸಿದೆ.

'ಸುರಕ್ಷಿತ ಹಾಗೂ ನ್ಯಾಯಯುತವಾಗಿ ಪರೀಕ್ಷೆ ನಡೆಸಲು ಸಂಬಂಧಿತ ಸಚಿವಾಲಯಗಳು, ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ನಿಕಟ ಸಮನ್ವಯ ಸಾಧಿಸಿವೆ ಎಂದು ನಾವು ಭರವಸೆ ನೀಡಲು ಬಯಸುತ್ತೇವೆ. ಪ್ರಾಮಾಣಿಕ ವಿದ್ಯಾರ್ಥಿಗಳ ಹಿತರಕ್ಷಣೆಗೆ ನಮ್ಮ ಆದ್ಯತೆಯಾಗಿದೆ' ಎಂದು ತಿಳಿಸಿದೆ.

ಮಾನಸಿಕವಾಗಿ ಸಮಸ್ಯೆ ಎದುರಾದರೆ '14416' ಸಂಖ್ಯೆಗೆ ಕರೆ ಮಾಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ತಾಳ್ಮೆ ಕಾಪಾಡಲು ಪೋಷಕರು ಹಾಗೂ ಶಿಕ್ಷಕರೂ ನೆರವಾಗುವಂತೆ ಮನವಿ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries