HEALTH TIPS

ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ-ಪಾಕ್ ಸೇನಾಧಿಕಾರಿಗಳ ಅಪರೂಪದ ಹಸ್ತಲಾಘವ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಬಂದಿದ್ದ ಪಾಕಿಸ್ತಾನದ ಪ್ರಜೆಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಜೂನ್ 12ರಂದು ಪಾಕಿಸ್ತಾನದ ಪ್ರಜೆ ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ್ದರು.

ಆರು ದಿನಗಳ ಬಳಿಕ ವಾಪಸ್ ಕಳುಹಿಸಲಾಗಿದೆ.

ಈ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನದ ಸೇನಾಧಿಕಾರಿಗಳು ಪರಸ್ಪರ ಹಸ್ತಲಾಘವ ಮಾಡಿರುವ ಅಪರೂಪದ ಘಟನೆಯು ನಡೆದಿದೆ.

'ಜೂನ್ 12ರಂದು ಕುಪ್ವಾರದಲ್ಲಿ ಗಡಿ ಪ್ರವೇಶಿಸಿದ್ದ ಖೈಬರ್ ಪಖ್ತುನ್ಖ್ವಾ (ಕೆಪಿಕೆ) ಪ್ರಾಂತ್ಯದ ನಿವಾಸಿ ಅಸದ್ ಖಾನ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಭಾರತದಲ್ಲಿ ಅವರನ್ನು ಅತ್ಯಂತ ಗೌರವ ಹಾಗೂ ಸಹಾನುಭೂತಿಯಿಂದ ನಡೆಸಲಾಯಿತು. ಇದು ಮಾನವೀಯ ಮೌಲ್ಯ ಹಾಗೂ ನಡವಳಿಕೆಗೆ ಭಾರತೀಯ ಸೇನೆಯ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.

ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕ್ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತವು ಆಪರೇಷನ್ ಸಿಂಧೂರ ಹೆಸರಿನ ಸೇನಾ ಕಾರ್ಯಾಚರಣೆಯನ್ನು ನಡೆಸಿತ್ತು. ಅದಾದ ಬಳಿಕ ಉಭಯ ದೇಶಗಳ ನಡುವಣ ಬಾಂಧವ್ಯ ಹದಗೆಟ್ಟಿದೆ.

Repatriation of Pak National A Pakistani national, Asad Khan, a resident of Khyber Pakhtunkhwa (KPK), who was apprehended in Simari village, Kupwara, on 12 June 2026 after crossing the Line of Control, was repatriated to Pakistan on 18 June 2026. During his stay in India, Asad Show more
1K
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries