ಪ್ಯಾರಿಸ್/ಬೆಲ್‌ಗ್ರೇಡ್ (AFC/PTI): ಯೂರೋಪ್‌ನಾದ್ಯಂತ ತಾಪಮಾನವು ಅತ್ಯಧಿಕವಾಗಿದ್ದು, ಜೂನ್ 21ರಿಂದ ಈವರೆಗೆ 1300 ಜನರು ಮೃತಪಟ್ಟಿದ್ದಾರೆ.
ಯುರೋಪ್‌ನ ಮಧ್ಯ ಮತ್ತು ಪೂರ್ವ ಭಾಗದಲ್ಲಿ ಸೋಮವಾರ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಿತ್ತು.
ಅಧಿಕ ಶಾಖದ ಪರಿಣಾಮವಾಗಿ ಜೂನ್ 18ರಿಂದ ಫ್ರಾನ್ಸ್‌ನಲ್ಲಿ 74 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪೋಲೆಂಡ್‌ನಲ್ಲಿ ಭಾನುವಾರ 17 ಮಂದಿ ಸತ್ತಿ ದ್ದಾರೆ.
ವಾರಾಂತ್ಯದಲ್ಲಿ ಜೆಕ್ ಗಣರಾಜ್ಯದಲ್ಲಿ 41.9 ಡಿಗ್ರಿ ಸೆಲ್ಸಿಯಸ್, ಜರ್ಮನಿಯಲ್ಲಿ 41.7 ಡಿಗ್ರಿ ಸೆಲ್ಸಿಯಸ್ ಮತ್ತು ಪೋಲೆಂಡ್ ನಲ್ಲಿ 40.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಬಾಲ್ಕನ್‌ನಲ್ಲಿ ಸೋಮವಾರವೂ ತಾಪಮಾನ ಏರಿಕೆ ಕಂಡಿತ್ತು. ಕ್ರೊಯೇ ಷಿಯಾದಲ್ಲಿ ಅಪಾಯಕಾರಿ ಪರಿಸ್ಥಿತಿ ಇರುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಬೋಸ್ನಿಯಾ ಮತ್ತು ಅಲ್ಬಾನಿಯಾದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಾಗುವ ನಿರೀಕ್ಷೆಯಿದೆ. ಬೋಸ್ನಿಯಾದ ನಗರ ಮೊಸ್ತರ್ ಬಳಿ ಕಾಳ್ಗಿಚ್ಚು ಉಂಟಾಗಿದ್ದು, ಬೆಂಕಿ ನಂದಿಸಲು ರಕ್ಷಣಾ ಸಿಬ್ಬಂದಿ ಎರಡು ದಿನಗಳಿಂದ ಹರಸಾಹಸಪಡುತ್ತಿದ್ದಾರೆ. ಯುರೋಪ್‌ನ 13 ಕೋಟಿ ಜನರು 35 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ಎದುರಿಸಿದ್ದಾರೆ.

