HEALTH TIPS

ನಿನಗೇನಾದರೂ ಹುಚ್ಚು ಹಿಡಿದಿದೆಯೇ:ನೆತನ್ಯಾಹು ನಿಂದಿಸಿದ್ದನ್ನು ಒಪ್ಪಿಕೊಂಡ ಟ್ರಂಪ್

 ಬೈರೂತ್: ದೂರವಾಣಿ ಕರೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು 'ಹುಚ್ಚ' ಎಂದು ಕರೆದಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಬುಧವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್‌, ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿಯಿಂದಾಗಿ ಇರಾನ್ ಜೊತೆಗಿನ ಶಾಂತಿ ಮಾತುಕತೆಗೆ ಹಿನ್ನಡೆ ಉಂಟಾಗುತ್ತಿದೆ.ಇದರಿಂದ ಬೇಸರವಾಗಿದೆ ಎಂದೂ ಅವರು ಹೇಳಿದ್ದಾರೆ. 


ಉಭಯ ದೇಶಗಳ ನಡುವಿನ ವೈಮನಸ್ಸನ್ನು ಒಪ್ಪಿಕೊಂಡಿದ್ದರೂ ಸಹ, ನೆತನ್ಯಾಹು ಅವರೊಂದಿಗಿನ ತಮ್ಮ ಸಂಬಂಧವು ಗಟ್ಟಿಯಾಗಿದೆ ಎಂದು ಟ್ರಂಪ್‌ ಒತ್ತಿ ಹೇಳಿದ್ದಾರೆ. ಯುದ್ಧಕಾಲದ ನಾಯಕರಾಗಿರುವುದರಿಂದ ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಎಂದಿದ್ದಾರೆ.

ನನಗೆ ನೆತನ್ಯಾಹು ತುಂಬಾ ಇಷ್ಟ. ನಾವು ಒಟ್ಟಿಗೆ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೇವೆ. ಮುಂದೆಯು ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ ಎಂದು ಟ್ರಂಪ್ ನ್ಯೂಯಾರ್ಕ್ ಪೋಸ್ಟ್‌ನ 'ಪಾಡ್ ಫೋರ್ಸ್ ಒನ್'ಗೆ ತಿಳಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?

ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿಯನ್ನು ಖಂಡಿಸಿ, ಅಮೆರಿಕ ದೊಂದಿಗಿನ ಶಾಂತಿ ಒಪ್ಪಂದದ ಮಾತು ಕತೆಯನ್ನು ಕೊನೆಗೊಳಿಸುವುದಾಗಿ ಇರಾನ್‌ ಎಚ್ಚರಿಸಿತ್ತು. ಈ ಬೆನ್ನಲ್ಲೇ ಟ್ರಂಪ್ ಅವರು ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ ಬೈರೂತ್ ಮೇಲಿನ ದಾಳಿ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಮಾತುಕತೆ ಸಂದರ್ಭದಲ್ಲಿ ಅಸಭ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ, ನೆತನ್ಯಾಹು ಅವರ ಮೇಲೆ ಟ್ರಂಪ್ ಟೀಕಾಪ್ರಹಾರ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

'ನಿನಗೇನಾದರೂ ಹುಚ್ಚು ಹಿಡಿದಿದೆಯೇ? ಇಂಥ ನಡೆಯಿಂದಾಗಿ ಈಗ ಎಲ್ಲರೂ ಇಸ್ರೇಲ್‌ ಅನ್ನು ದ್ವೇಷಿಸುತ್ತಿದ್ದಾರೆ. ನಾನೇನಾದರೂ ನಿನ್ನ ಬೆಂಬಲಕ್ಕೆ ಇರದೇ ಹೋಗಿದ್ದರೆ ಇಷ್ಟು ಹೊತ್ತಿಗೆ ನೀನು ಜೈಲಿನಲ್ಲಿ ಇರುತ್ತಿದ್ದೆ' ಎಂದು ನೆತನ್ಯಾಹು ಅವರನ್ನು ಟ್ರಂಪ್‌ ತರಾಟೆಗೆ ತೆಗೆದುಕೊಂಡಿದ್ದಾರೆ' ಎಂದು ಅಮೆರಿಕದ ಮಾಧ್ಯಮ ಸಂಸ್ಥೆ 'ಆಯಕ್ಸಿಯೋಸ್' ವರದಿ ಮಾಡಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries