ಕೀವ್ (AP): ಸೇಂಟ್ ಪೀಟರ್‍ಸ್‌ಬರ್ಗ್ ನಲ್ಲಿರುವ ತೈಲ ಸಂಗ್ರಹಣಾ ಕೇಂದ್ರದ ಮೇಲೆ ಉಕ್ರೇನ್‌ನ ಡ್ರೋನ್‌ಗಳು ದಾಳಿ ಮಾಡಿದ್ದು, ಅದನ್ನು ನಾಶಗೊಳಿ ಸಿವೆ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಬುಧವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಆರ್ಥಿಕಸಮ್ಮೇಳನವು ನಗರದಲ್ಲಿ ನಡೆಯುತ್ತಿರು ವಾಗಲೇ ಈ ದಾಳಿ ನಡೆದಿದೆ.
ದೂರಗಾಮಿ ಡ್ರೋನ್‌ಗಳು 1,000 ಕಿ.ಮೀ.ಗಿಂತಲೂ ಹೆಚ್ಚು ಹಾರಾಟ ನಡೆಸಿ ಸಂಗ್ರಹಣಾ ಕೇಂದ್ರದ ಮೇಲೆ ದಾಳಿ ನಡೆಸಿವೆ ಎಂದು ಝೆಲೆನ್‌ಸ್ಕಿ ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ದಾಳಿಯ ನಂತರ ನಗರದ ಬಂದರಿನ ಮೇಲೆ ಕಪ್ಪು ಹೊಗೆಯ ಮೋಡಗಳು ಕಾಣಿಸಿಕೊಂಡವು.
ನಗರದ ಮೂಲಸೌಕರ್ಯವನ್ನುಗುರಿಯಾಗಿಸಿ ಉಕ್ರೇನ್‌ನ ಡ್ರೋನ್‌ಗಳು ದಾಳಿ ನಡೆಸಿವೆ ಎಂದುರಷ್ಯಾ ಅಧಿಕಾರಿಗಳು ಹೇಳಿದ್ದು, ಹೆಚ್ಚಿನಮಾಹಿತಿಯನ್ನು ನೀಡಿಲ್ಲ ದಾಳಿಯಿಂದಾಗಿ ಸೇಂಟ್ ಪೀಟರ್‍ಸ್‌ಬರ್ಗ್‌ನ ವಿಮಾನನಿಲ್ದಾಣದಲ್ಲಿ ರಾತ್ರಿಯಿಡೀ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿತ್ತು. ಅಲ್ಲದೆ, ಮೊಬೈಲ್ ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು.
ಶುಕ್ರವಾರ ನಡೆಯುಲಿರುವ ಸಮ್ಮೇಳನದಲ್ಲಿ ಪುಟಿನ್ ಮಾತ ನಾಡಲಿದ್ದಾರೆ. ರಷ್ಯಾ ಇದನ್ನು ಪ್ರತಿಷ್ಠೆಯ ಕಾರ್ಯಕ್ರಮವೆಂದು ಪರಿಗಣಿಸಿದೆ. ಆದಾಗ್ಯೂ, ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಾಲ್ಕು ವರ್ಷದಿಂದ ಪ್ರಮುಖ ಪಾಶ್ಚಾತ್ಯ ಹೂಡಿಕೆದಾರರು, ಅಧಿಕಾರಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಈ ವರ್ಷ ಸೌದಿ ಅರೇಬಿಯಾ ವಿಶೇಷ ಅತಿಥಿ ರಾಷ್ಟ್ರವಾಗಿದ್ದು, ವ್ಯಾಪಾರಿಗಳ ನಿಯೋಗವನ್ನು ರಷ್ಯಾಗೆ ಕಳುಹಿಸಿದೆ.

