ಕಾಸರಗೋಡು: "ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ' ಎಂಬ ಶೀರ್ಷಿಕೆಯಡಿಲ್ಲಿ ಯಕ್ಷಗಾನ ವಲಯದ ವಿದ್ವಾಂಸರು, ಸಂಘಟಕರು, ಕಲಾವಿದರು ಹಾಗೂ ಮಾಧ್ಯಮದವರು ಜೊತೆಗೂಡಿ 'ಪ್ರಸಕ್ತ ವಿದ್ಯಮಾನಗಳತ್ತ ಬೆಳಕಿನ ಕಿರಣ' ಎಂಬ ವಿಚಾರ ಗೋಷ್ಠಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಜರುಗಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನಿಡಿದರು.
ಯಕ್ಷಗಾನವಲಯದ ದಿಗ್ಗಜ ವಿದ್ವಾಂಸರಾದ ಡಾ. ಎಂ. ಪ್ರಭಾಕರ್ ಜೋಶಿ ಮತ್ತು ಪ್ರಸಂಗ ಕರ್ತ ವಿದ್ವಾಂಸ ಡಾ. ರಾಘವನ್ ನಂಬಿಯಾರ್ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆಯ ಉಪನ್ಯಾಸ ನೀಡಿದರು.
ಹಿಂದಿನ ಕಲಾಪ್ರದರ್ಶನ, ಹಿಂದಿನ ಪ್ರೇಕ್ಷಕರು, ಸ್ಪಂದನೆ, ಇಂದಿನ ಕಲಾವಿದರ ರಂಗಪ್ರಸ್ತುತಿ, ಹಾಸ್ಯವನ್ನು ಸೇರಿಸಿ ಕಲಾವಿದರ ಅಭಿಮಾನಿಗಳಾಗುವ ಪ್ರೇಕ್ಷಕರು, ಅದಕ್ಕೆ ಸ್ಪಂದಿಸುವ ಕಲಾವಿದರು, ಸಂಪ್ರದಾಯ ಮತ್ತು ನವೀನತೆಯ ನಡುವೆ ಸಮತೋಲನ ಹೇಗೆ ಸಾಧಿಸಬಹುದು ಮುಂತಾದ ವಿಷಯಗಳ ಸುತ್ತಮುತ್ತ ಹರಿಕೃಷ್ಣ ಹೊಳ್ಳ ಬ್ರಹ್ಮಾವರ, ಉಪನ್ಯಾಸಕರು ಹವ್ಯಾಸಿ ಬಾಗವತರು ವಿಷಯ ಮಂಡಿಸಿದರು.
ಪತ್ರಕರ್ತ ಲಕ್ಷ್ಮಿ ಮಚ್ಚಿನ ಅವರು "ಎಲ್ಲವನ್ನು ವಿಮರ್ಶಿಸುವ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮೂಲಕ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರ ಲಭ್ಯತೆ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕರಾದ, ಕಲಾವಿದ ಉಜಿರೆ ಅಶೋಕ್ ಭಟ್, ಲೇಖಕ ಹಾಗೂ ಅರ್ಥದಾರಿಗಳಾದ ರಾಧಾಕೃಷ್ಣ ಕಲ್ಚಾರ್, ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಡಾ.ರತ್ನಾಕರ ಮಲ್ಲಮೂಲೆ ವಿಚಾರ ಮಂಡಿನೆ ಮಾಡಿದರು.
ಸತೀಶ ಅಡಪ್ಪ ಸಂಕಬೈಲು, ಯೋಗೀಶ ರಾವ್ ಚಿಗುರುಪಾದೆ, ವೆಂಕಟೇಶ ನಾವಡ ಪೆÇಳಲಿ, ಧನಂಜಯ ನೆಲ್ಯಾಡಿ ಮೈಸೂರು, ಶ್ರೀ ವಿ. ರಾಘವೇಂದ್ರ ಉಡುಪ, ನೇರಳೆ ಕಟ್ಟೆ, ನಿತ್ಯಾನಂದರಾವ್ ಪೇಜಾವರ, ಪದ್ಮ ಆಚಾರ್ ಪುತ್ತೂರು, ಮಹೇಶ ಮಣಿಯಾಣಿ ದೊಡ್ಡತೋಟ, ದೇವಕಾನ ಶ್ರೀಕೃಷ್ಣ ಭಟ್, ದಿವಾಣ ದುರ್ಗಾ ಪ್ರಸಾದ್ ಕಟೀಲು, ದಿನೇಶ ಉಪ್ಪೂರ, ಸದಾಶಿವ ನಲ್ಲಿಮಾರು ಮೂಡುಬಿದರೆ, ಗೋಪಿಕಾ ಸತೀಶ ಮಯ್ಯ, ವಿಷ್ಣುಶರ್ಮ ವಾಟೆಪಡುಪು, ರವಿ ಅಲೆವೂರಾಯ, ದೇವಾನಂದ ಭಟ್ ಬೆಳುವಾಯಿ, ಸಿತ್ಲಾ ರಂಗನಾಥರಾವ್, ಶ್ರೀ ರಾಜಾರಾಮರಾವ್ ಮೀಯಪದವು, ಸುಬ್ಬಪ್ಪ ಕೈಕಂಬ, ಭುಜಬಲಿ ಧರ್ಮಸ್ಥಳ, ಅಮ್ಮುಂಜೆ ಜನಾರ್ದನ, ಶ್ಯಾಮ್ ಕುಂಚಿನಡ್ಕ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿದರು. ಡಾ. ಶ್ರುತಿಕೀರ್ತಿರಾಜ ಉಜಿರೆ, ಹರೀಶ ಬಳಂತಿಮುಗರು ಕಾರ್ಯಕ್ರಮ ನಿರೂಪಿಸಿದರು. ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ "ಗುರುದಕ್ಷಿಣೆ-ಅಸಿಕಾ ಪರಿಣಯ" ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.



