ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ದೃಡಕಲಶೋತ್ಸವ ಸಮಾರಂಭ ನೆರವೇರಿತು. ತಂತ್ರಿ ಶ್ರೀಕೃಷ್ಣ ಗುರೂಜಿ ನೇತೃತ್ವ ವಹಿಸಿದ್ದರು. ಶ್ರೀ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ , ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕೊರಕ್ಕೋಡು, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಮಹಿಳಾ ಸಮಿತಿ ಕಾರ್ಯದರ್ಶಿ ಹರ್ಷಿತಾ, ಮಾತೃ ಸಮಿತಿ ಅಧ್ಯಕ್ಷೆ ರಾಧಿಕಾ ರಂಜಿತ್, ಕಾರ್ಯದರ್ಶಿ ದೀಪಾ ರಾಜೇಶ್, ಪುಷ್ಪಲತಾ ಕಾಳ್ಯಂಗಾಡು, ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು. ರಂಜಿತ್ ಮನ್ನಿಪ್ಪಾಡಿ ಸ್ವಾಗತಿಸಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಗೋವಿಂದ ನಾಯ್ಕ್ ಕಾಳ್ಯಂಗಾಡು ವಂದಿಸಿದರು.



