HEALTH TIPS

ಐವರು ಭಾರತೀಯ ಸೇನಾಧಿಕಾರಿಗಳ ಬಲಿಪಡೆದ ವಿಮಾನ ಅಪಘಾತದ ಅಂತಿಮ ಕ್ಷಣದ ದೃಶ್ಯ ಬಹಿರಂಗ

ಜೊರ್ಹಟ್:  ಭಾರತೀಯ ವಾಯುಪಡೆಯ AN-32 ವಿಮಾನ ಅಸ್ಸಾಂ ಜೋರ್ಹಟ್‌ನಲ್ಲಿ ದುರಂತಕ್ಕೀಡಾದ ಘಟನೆಗೆ ದೇಶವೇ ಮರುಗಿದೆ. ವಾಯುಪಡೆಯ ಐವರು ಅಧಿಕಾರಿಗಳು ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ. ಕೋ ಪೈಲೆಟ್ ಪವಾಡ ಸದೃಶ್ಯ ಪಾರಾಗಿದ್ದಾರೆ. ಈ ದುರಂತ ಘಟನೆ ಹೇಗಾಯಿತು ಅನ್ನೋ ಕುರಿತು ಸ್ಪಷ್ಟ ವಿಡಿಯೋ ಬಹಿರಂಗವಾಗಿದೆ.

ವಾಯುಪಡೆಯ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಬಳಿಕ ರನ್‌ವೇನಿಂದ ಪಕ್ಕಕ್ಕೆ ಸರಿದು ದುರಂತ ಸಂಭವಿಸಿದೆ. ಈ ವಿಡಿಯೋ ಅಪಘಾತದ ಕುರಿತ ಸ್ಪಷ್ಟ ಚಿತ್ರಣ ನೀಡುತ್ತಿದೆ.

ಜೋರ್ಹಟ್ ನಿಲ್ದಾಣದಲ್ಲಿ ವಾಯುಪಡೆಯ AN-32 ವಿಮಾನ ಯಾವುದೇ ಅಡೆ ತಡೆ ಇಲ್ಲದೆ, ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ವೇಗವಾಗಿ ಲ್ಯಾಂಡ್ ಆದ ವಿಮಾನ ರನ್‌ವೇನಲ್ಲಿ ಸಾಗುತ್ತಿದ್ದಂತೆ ಪಕ್ಕಕ್ಕೆ ಸರಿದಿದೆ. ಬಳಿಕ ನಿಯಂತ್ರಣವೇ ಸಿಗದಾಗಿದೆ. ಅದೇ ವೇಗದಲ್ಲಿ ಸಾಗಿದ ವಿಮಾನ ಹುಲ್ಲು ಪ್ರದೇಶದ ಮೇಲೆ ಸಾಗಿತ್ತು. ಬಳಿಕ ಹುಲ್ಲು, ಮಣ್ಣಿನ ದಿಬ್ಬಗಳಿಗೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಸಂಪೂರ್ಣ ಆವರಿಸಿಕೊಂಡಿದೆ. ಸೆಕೆಂಡ್‌ಗಳ ಅಂತರದಲ್ಲಿ ದುರಂತ ನಡೆದಿದೆ.

ಅಗ್ನಿಶಾಮಕ ದಳ, ಸಿಬ್ಬಂದಿಗಳಿಗೆ ಕಾರ್ಯಾಚರಣೆ

ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ ಅಷ್ಟರಲ್ಲಾಗಲೇ ವಿಮಾನ ಭಾಗಶಃ ಹೊತ್ತಿ ಉರಿದಿತ್ತು. ಹೀಗಾಗಿ ಬೆಂಕಿ ಜ್ವಾಲೆ ನಿಯಂತ್ರಣಕ್ಕೆ ತರುವುದು ಸುಲಭವಾಗಿರಲಿಲ್ಲ. ಮೊದಲ ಅಗ್ನಿಶಾಮಕ ದಳ ಸಂಪೂರ್ಣ ನೀರನ್ನು ಬಳಿಸಿದರೂ ಬೆಂಕಿ ಆರಲಿಲ್ಲ. ಹೀಗಾಗಿ ಮತ್ತೊಂದು ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ವಾಯಪಡೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಯಾಚರಣೆ ತೀವ್ರಗೊಂಡಿತ್ತು. ಅಷ್ಟರಲ್ಲಿ ವಿಮಾನ ಬಹುತೇಕ ಹೊತ್ತಿ ಉರಿದಿತ್ತು. ವಾಯುಪಡೆ ವಿಮಾನ ಲ್ಯಾಂಡಿಂಗ್, ರನ್‌ವೇನಿಂದ ಪಕ್ಕಕ್ಕೆ ಸರಿದು ಅಪಘಾತ, ಬಳಿಕ ಅಗ್ನಿಶಾಮಕದಳದ ಕಾರ್ಯಾಚರಣೆ ಸೇರಿ ಸಂಪೂರ್ಣ ಘಟನೆಯ ವಿಡಿಯೋ ಲಭ್ಯವಾಗಿದೆ. ಕೆಲ ಸೆಕೆಂಡ್‌ಗಳ ಕಾಲ ರನ್‌ವೇನಲ್ಲಿ ಸಾಗಿದ್ದರೆ ವಿಮಾನ ಪತನವಾಗುತ್ತಿರಲಿಲ್ಲ. ಆದರೆ ಇದಕ್ಕಿದ್ದಂತೆ ರನ್‌ವೇನಿಂದ ಎಡಕ್ಕೆ ಡ್ರಿಫ್ಟ್ ಆಗಲು ಕಾರಣವೇನು? ಈ ಕುರಿತು ಹಲವು ಪ್ರಶ್ನೆಗಳು ಮೂಡಿದೆ.

ವಾಯುಪಡೆ ಈಗಾಗಲೇ ತನಿಖೆಗೆ ಆದೇಶಿಸಿದ್ದು, ತನಿಖೆ ತೀವ್ರಗೊಂಡಿದೆ. ದುರಂತ ಅಂದರೆ ಐವರು ಅಧಿಕಾರಿಗಳು ಈ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತ ಘಟನೆಯ ಈ ದೃಶ್ಯ ಇದೀಗ ತನಿಖೆಗೆ ಪ್ರಮುಖ ಆಧಾರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries