HEALTH TIPS

ಭಾರತೀಯ ಅಮೆರಿಕನ್‌ ಎಂಜಿನಿಯರ್ ಸ್ಥಾಪಿತ ಕಂಪನಿಯ 'ಡ್ರೋನ್‌ ಬೋಟ್‌' ಬಳಕೆ

ವಾಷಿಂಗ್ಟನ್: ಹೊರ್ಮುಜ್‌ ಜಲಸಂಧಿ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಪತನಗೊಂಡಿದ್ದ ಅಮೆರಿಕದ ಅಪಾಚೆ ಹೆಲಿಕಾಪ್ಟರ್‌ನ ಇಬ್ಬರು ಸಿಬ್ಬಂದಿಯ ರಕ್ಷಣೆಗೆ 'ಕಾರ್ಸ್‌ಏರ್‌' ಕಂಪನಿ ಅಭಿವೃದ್ದಿಪಡಿಸಿರುವ 'ಡ್ರೋನ್‌ ಬೋಟ್‌' ಬಳಸಲಾಗಿದೆ.

ಟೆಕ್ಸಾಸ್‌ನ ಆಸ್ಟಿನ್‌ ನಗರದಲ್ಲಿರುವ ಸರೋನಿಕ್ ಟೆಕ್ನಾಲಜೀಸ್‌ ಸಂಸ್ಥೆಯು ಈ 'ಬೋಟ್‌ ಡ್ರೋನ್‌' ತಯಾರಿಸಿದೆ.

ಭಾರತೀಯ ಅಮೆರಿಕನ್ ವಿಭವ ಅಲ್ಟೇಕರ್‌ ಅವರು ಈ ಕಂಪನಿಯ ಸಹಸಂಸ್ಥಾಪಕ ಎಂಬುದು ಗಮನಾರ್ಹ.

2022ರಲ್ಲಿ ಡಿನೊ ಮವ್ರೂಕಸ್‌ ಅವರು ಈ ಕಂಪನಿ ಸ್ಥಾಪಿಸಿದ್ದಾರೆ. ಅಲ್ಟೇಕರ್‌ ಅಲ್ಲದೇ, ಡೊ ಲ್ಯಾಂಬರ್ಟ್‌ ಹಾಗೂ ರಾಬ್‌ ಲೆಹ್‌ಮನ್‌ ಈ ಕಂಪನಿಯ ಸಹಸಂಸ್ಥಾಪಕರಾಗಿದ್ದಾರೆ.

ಅಲ್ಟೇಕರ್‌ ಅವರು ಆಟೊನಾಮಸ್‌ ಸಿಸ್ಟಮ್‌ ಹಾಗೂ ಸಾಗರಯಾನ ತಂತ್ರಜ್ಞಾನ ಪರಿಣಿತರಾಗಿದ್ದು, ಕಂಪನಿ ಸ್ಥಾಪಿಸುವುದಕ್ಕೂ ಮುನ್ನ ಅಮೆರಿಕದ ರಕ್ಷಣಾ ತಂತ್ರಜ್ಞಾನ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಅಮೆರಿಕದ ಸಶಸ್ತ್ರ ಪಡೆಗಳು ಇದೇ ಮೊದಲ ಬಾರಿಗೆ ಇಂತಹ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವುದು ವಿಶೇಷ. ಇದುವರೆಗೆ, ಇಂತಹ ಕಾರ್ಯಾಚರಣೆಗಳಿಗೆ 'ಮಾನವರಹಿತ ವೈಮಾನಿಕ ವಾಹನ'ಗಳನ್ನು(ಯುಎವಿ) ಬಳಕೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ, ಸಮುದ್ರದ ಮೇಲ್ಮೈನಲ್ಲಿ ಸಂಚರಿಸಬಲ್ಲ 'ಮಾನವರಹಿತ ವಾಹನ' (ಯುಎಸ್‌ವಿ) ಡ್ರೋನ್‌ ಬೋಟ್‌ ಬಳಸಲಾಗಿದೆ.

ವೈಶಿಷ್ಟ್ಯಗಳು: 24 ಅಡಿ ಉದ್ದವಿರುವ 'ಕಾರ್ಸ್‌ಏರ್', ಡಿಸೇಲ್‌ ಚಾಲಿತ 'ಡ್ರೋನ್‌ ಬೋಟ್‌'. ಇದು ಗರಿಷ್ಠ ಗಂಟೆಗೆ 35 ನಾಟ್‌ ವೇಗದಲ್ಲಿ ಚಲಿಸಬಲ್ಲದು. 453 ಕೆ.ಜಿ ಯಷ್ಟು ಭಾರ ಹೊತ್ತು ಸಾವಿರ ನಾಟಿಕಲ್‌ ಮೈಲುಗಳಷ್ಟು ದೂರ ಸಾಗುವ ಸಾಮರ್ಥ್ಯ ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries