HEALTH TIPS

ಮೂತ್ರಪಿಂಡ ರೋಗಿಗಳಿಗೆ ಭರವಸೆ ಮೂಡಿಸಿದ ಅಜಾನೂರು ಗ್ರಾಮ ಪಂಚಾಯಿತಿ ಡಯಾಲಿಸಿಸ್ ಕೇಂದ್ರ

ಕಾಸರಗೋಡು: ಗ್ರಾಮೀಣ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಹೆಸರು ದಾಖಲಿಸಿಕೊಂಡಿರುವ ಅಜಾನೂರು ಗ್ರಾಮ ಪಂಚಾಯಿತಿ  ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಗ್ರ ಸೌಲಭ್ಯಗಳನ್ನು ಹೊಂದಿರುವ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಿದ ಜಿಲ್ಲೆಯ ಮೊದಲ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಅಜಾನೂರು ಪಾತ್ರವಾಗಿದೆ. ಸ್ಥಳೀಯ ಮಟ್ಟದಲ್ಲಿ ಮೂತ್ರಪಿಂಡ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‍ಎಎಲ್) ನ ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ನಿಧಿ ಮತ್ತು ಪಂಚಾಯಿತಿ ಸ್ವಂತ ನಿಧಿಯಿಂದ 1.10 ಕೋಟಿ ರೂ.ಗಳ ಕೊಡುಗೆಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಡಯಾಲಿಸಿಸ್‍ಈ ಉಪಕರಣಗಳನ್ನು ಸಂಪೂರ್ಣವಾಗಿ ಸಿಎಸ್‍ಆರ್ ನಿಧಿಯ ಮೂಲಕ ಸಂಗ್ರಹಿಸಲಾಗಿದೆ. ಅಜಾನೂರು ಕಡಲತೀರದಲ್ಲಿರುವ ಕುಟುಂಬ ಆರೋಗ್ಯ ಕೇಂದ್ರದ ಒಂದು ಭಾಗವನ್ನು ನವೀಕರಿಸುವ ಮೂಲಕ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಲಾಗಿದೆ.    ಗ್ರಾಮ ಪಂಚಾಯತ್ ನಿಧಿಯಿಂದ ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ಪೂರ್ಣಗೊಂಡಿತು. ಚಿಕಿತ್ಸೆಗಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸಬೇಕಾದ ಮೂತ್ರಪಿಂಡ ರೋಗಿಗಳಿಗೆ ಯೋಜನೆ ವರದಾನವಾಗಿದೆ. ಕೇಂದ್ರವು ಎಂಟು ಡಯಾಲಿಸಿಸ್ ಹಾಸಿಗೆಗಳನ್ನು ಹೊಂದಿದ್ದು, ಇವುಗಳಲ್ಲಿ ಏಳು ಕಾರ್ಯನಿರ್ವಹಿಸುತ್ತಿವೆ ಮತ್ತು ತುರ್ತು ಸಂದರ್ಭದಲ್ಲಿ ಒಂದನ್ನು ಬ್ಯಾಕಪ್ ವ್ಯವಸ್ಥೆಯಾಗಿ ಬಳಸಲಾಗುತ್ತಿದೆ. 

ಶುದ್ಧ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದ್ದು,  ವಿದ್ಯುತ್ ಮೊಟಕುಗೊಳ್ಳದಂತೆ  ಆರ್‍ಒ ಪ್ಲಾಂಟ್ ಮತ್ತು ಜನರೇಟರ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಕೇಂದ್ರವನ್ನು ಪರಿಸರ ಸ್ನೇಹಿ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸಲಾಗಿದ್ದು, ಇಲ್ಲಿ ಆರೋಗ್ಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. 15 ಲಕ್ಷ ರೂ. ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕವನ್ನು ಸಹ ಸ್ಥಾಪಿಸಲಾಗಿದೆ. 

ಡಯಾಲಿಸಿಸ್ ಸಿಬ್ಬಂದಿಯ ವೇತನ, ಡಯಾಲಿಸಿಸ್ ಕಿಟ್‍ಗಳು ಮತ್ತು ಇತರ ಸಂಬಂಧಿತ ಸಾಮಗ್ರಿಗಳಿಗಾಗಿ ಗ್ರಾಮ ಪಂಚಾಯಿತಿಯ ಸ್ವಂತ ನಿಧಿಯಿಂದ 14 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ. ಈ ಹಣವನ್ನು ಡಯಾಲಿಸಿಸ್ ಸಿಬ್ಬಂದಿಯ ವೇತನ, ಡಯಾಲಿಸಿಸ್ ಕಿಟ್‍ಗಳು ಮತ್ತು ಇತರ ಸಂಬಂಧಿತ ಸಾಮಗ್ರಿ ಖರೀದಿಗಾಗಿ ಬಳಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries