HEALTH TIPS

ಹೊರ್ಮುಜ್ ಜಲಸಂಧಿ ಮುಕ್ತವಾಗಿರುವುದು ಸ್ವಾಗತಾರ್ಹ ಕ್ರಮ: ಅಜಿತ್ ಡೊಭಾಲ್

ನವದೆಹಲಿ: ಜಾಗತಿಕ ಇಂಧನ ಭದ್ರತೆಯ ದೃಷ್ಟಿಯಿಂದ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮಂಗಳವಾರ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಆರ್ಥಿಕ ಒತ್ತಡಗಳ ಪ್ರಭಾವದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಅಲ್ಲದೆ, ಈ ಸವಾಲುಗಳನ್ನು ಎದುರಿಸುವಲ್ಲಿ ಬ್ರಿಕ್ಸ್ ಒಕ್ಕೂಟವು ಮಹತ್ವದ ಪಾತ್ರ ವಹಿಸಬೇಕಾದ ಅಗತ್ಯತೆ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

'ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಭಾರತ ಸ್ವಾಗತಿಸುತ್ತದೆ. ನಾವು ಶಾಂತಿ ಒಪ್ಪಂದದ ಬಗ್ಗೆ ಆಶಾವಾದ ಹೊಂದಿದ್ದು, ಯಶಸ್ವಿಯಾಗಲಿದೆ ಎಂದು ಭಾವಿಸುತ್ತೇವೆ. ಇದು ಇಂಧನ ಭದ್ರತೆಗೆ ಸಹಕಾರಿಯಾಗಲಿದೆ' ಎಂದು ಡೊಭಾಲ್ ತಿಳಿಸಿದ್ದಾರೆ.

'ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದು ಪೂರೈಕೆ ಸರಪಳಿಯಲ್ಲಿದ್ದ ಅಡೆತಡೆಗಳನ್ನು ನಿವಾರಿಸುತ್ತದೆ. ರಸಗೊಬ್ಬರ ಹಾಗೂ ರಾಸಾಯನಿಕ ವಲಯಗಳಲ್ಲಿನ ಕೊರತೆ ನೀಗಿಸುತ್ತದೆ' ಎಂದು ಪ್ರತಿಪಾದಿಸಿದ್ದಾರೆ.

'ನಾವು ಅತ್ಯಂತ ಪ್ರಕ್ಷುಬ್ಧ ಸಮಯದಲ್ಲಿ ಸಭೆ ನಡೆಸುತ್ತಿದ್ದೇವೆ. ಜಗತ್ತು ಇಂದು ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಆರ್ಥಿಕ ಒತ್ತಡ ಮತ್ತು ವಿಚ್ಛಿದ್ರಕಾರಕ ತಂತ್ರಜ್ಞಾನವನ್ನು ಎದುರಿಸುತ್ತಿದೆ. ಬಹುಪಕ್ಷೀಯತೆ ಕ್ಷೀಣಿಸುತ್ತಿರುವ ಸದ್ಯದ ಸನ್ನಿವೇಶದಲ್ಲಿ ವಿವಿಧ ಸವಾಲುಗಳನ್ನು ಎದುರಿಸುವಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ವಹಿಸಬೇಕಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಬ್ರಿಕ್ಸ್' ಶಾಂತಿ, ಪ್ರಗತಿ, ಅಭಿವೃದ್ಧಿ ಮತ್ತು ಸಹಕಾರ ಮನೋಭಾವ ಹೊಂದಿರುವ ದೇಶಗಳ ಅತ್ಯಂತ ವಿಶೇಷವಾದ ಒಕ್ಕೂಟವಾಗಿದೆ. ಭಯೋತ್ಪಾದನೆ ನಿಗ್ರಹದ ಕುರಿತಾದ ಬ್ರಿಕ್ಸ್‌ನ ಎರಡು ಜಂಟಿ ಕಾರ್ಯಕಾರಿ ಸಮಿತಿಗಳ ಫಲಿತಾಂಶದ ಬಗ್ಗೆಯೂ ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

'ನಾವು ಹೊಸ ಭದ್ರತಾ ಬೆದರಿಕೆ ಮತ್ತು ಸವಾಲುಗಳ ಬಗ್ಗೆ ಜಾಗೃತರಾಗಿರಬೇಕು. ಸಾಂಪ್ರದಾಯಿಕವಲ್ಲದ ಬೆದರಿಕೆಗಳು ರಾಷ್ಟ್ರೀಯ ಗಡಿಗಳನ್ನು ಮೀರಿ ಬೆಳೆದಿದ್ದು, ಸಾಂಪ್ರದಾಯಿಕ ಪ್ರತಿಕ್ರಿಯೆಗಳನ್ನು ವಿಫಲಗೊಳಿಸುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ' ಎಂದಿದ್ದಾರೆ.

ವಿಚ್ಛಿದ್ರಕಾರಕ ತಂತ್ರಜ್ಞಾನಗಳಿಂದ ಉದ್ಭವಿಸುತ್ತಿರುವ ಸವಾಲುಗಳು ಸೇರಿದಂತೆ ಜಗತ್ತು ಎದುರಿಸುತ್ತಿರುವ ಸಾಂಪ್ರದಾಯಿಕವಲ್ಲದ ಭದ್ರತಾ ಬೆದರಿಕೆಗಳ ಬಗ್ಗೆಯೂ ಡೊಭಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ ಒಕ್ಕೂಟವು 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇರ್ಪಡೆಯೊಂದಿಗೆ ವಿಸ್ತರಣೆಯಾಗಿತ್ತು. ಬಳಿಕ 2025ರಲ್ಲಿ ಇಂಡೋನೇಷ್ಯಾ ಕೂಡ ಇದಕ್ಕೆ ಸೇರಿಕೊಂಡಿತ್ತು.

ಜಾಗತಿಕ ಜನಸಂಖ್ಯೆಯ ಶೇಕಡ 49.5ರಷ್ಟು, ಜಾಗತಿಕ ಜಿಡಿಪಿಯ ಶೇಕಡ 40ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇಕಡ 26ರಷ್ಟನ್ನು ಪ್ರತಿನಿಧಿಸುವ ವಿಶ್ವದ 11 ಪ್ರಮುಖ ಆರ್ಥಿಕತೆಗಳನ್ನು ಬ್ರಿಕ್ಸ್ ಒಟ್ಟುಗೂಡಿಸಿದ್ದು, ಪ್ರಭಾವಿ ಒಕ್ಕೂಟವಾಗಿ ಹೊರಹೊಮ್ಮಿದೆ.

ಅಜಿತ್ ಡೊಭಾಲ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸೆರ್ಗೆಯ್ ಶೋಯಿಗು, ಇರಾನ್‌ನ ಭದ್ರತಾ ಅಧಿಕಾರಿ ಘದೀರ್ ನೆಜಾಮಿಪೋರ್ ಮತ್ತು ಬ್ರಿಕ್ಸ್‌ನ ಇತರ ರಾಷ್ಟ್ರಗಳ ಉನ್ನತ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries