ಕಾಸರಗೋಡು: ದುಬೈಗಿರುವ ಪ್ರಯಾಣ ಮಧ್ಯೆ ವಿಮಾನ ನಿಲ್ದಾಣದಲ್ಲಿ ಪರಿಚಯಗೊಂಡ ಗೃಹಿಣಿಯೊಂದಿಗೆ ಸ್ನೇಹದ ಸೋಗಿನಲ್ಲಿ ಅತ್ಯಾಚಾರ ಗೈದು ಬೆದರಿಕೆಯೊಡ್ಡಿರುವ ಬಗ್ಗೆ ಕಾಸರಗೋಡು ಮಹಿಳಾ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 32ರ ಹರೆಯದ ಗೃಹಿಣಿ ನೀಡಿದ ದೂರಿನನ್ವಯ ಮಲಪ್ಪುರಂ ನಿವಾಸಿ ಸೈಫುದ್ದೀನ್ ಎಂಬಾತನ ವಿರುದ್ಧ ಈ ಕೇಸು ದಾಖಲಾಗಿದೆ. ಪತಿಯೊಂದಿಗೆ ದುಬೈಗೆ ತೆರಳುತ್ತಿರುವ ಮಧ್ಯೆ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಗೃಹಿಣಿಯನ್ನು ಸೈಫುದ್ದೀನ್ ಪರಿಚಯಗೊಂಡಿದ್ದನು. ಮುಂದೆ ಇವರು ಸೌಹಾರ್ದತೆಯಿಂದಿದ್ದರು. ಮಹಿಳೆಯ ಸೌಹಾರ್ದತೆ ದುರುಪಯೋಗಪಡಿಸಿಕೊಂಡ ಸೈಫುದ್ದೀನ್ ಗೃಹಿಣಿಯನ್ನು ಅತ್ಯಾಚಾರಗೈದಿದ್ದಾನೆ ಅಲ್ಲದೆ ಜೀವಬೆದರಿಕೆಯನ್ನೂ ಒಡ್ಡಿರುವುದಾಗಿ ಗೃಹಿಣಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

