ಕಾಸರಗೋಡು: 'ಆಪರೇಷನ್ ತೂಫಾನ್ ' ಅಂಗವಾಗಿ ವಿದ್ಯಾನಗರ ಠಾಣಾ ಪೆÇಲೀಸರು ಮಧೂರು ಪಟ್ಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧಿತ 21,873 ಪ್ಯಾಕೇಟ್ ಪಾನ್ ಮಸಾಲ ತಂಬಾಕು ಉತ್ಪನ್ನ ವಶ ಪಡಿಸಿಕೊಮಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಧೂರು ಪಟ್ಲ ಲಕ್ಷಂವೀಡ್ ಕಾಲನಿ ನಿವಾಸಿ ಕೆ. ಇಬ್ರಾಹಿಂ ಬಾದುಷಾ (36) ಎಂಬಾತನನ್ನು ಬಂಧಿಸಿದ್ದಾರೆ.
ವಿದ್ಯಾನಗರ ಠಾಣಾ ವ್ಯಾಪ್ತಿಯ ಪಟ್ಲ ಶಾಲಾ ವಠಾರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆಗಮಿಸಿದ ಕಾರನ್ನು ತಪಾಸಣೆಗೊಳಪಡಿಸಿದಾಗ ತಂಬಾಕು ಉತ್ಪನ್ನ ಪತ್ತೆಯಾಗಿದೆ.


