ಕಾಸರಗೋಡು: ಮದುವೆ ಸಮಾರಂಭದ ಮನೆಗೆ ಆಕ್ರಮವಾಗಿ ನುಗ್ಗಿ ವೃದ್ಧೆಯನ್ನು ಕೊಠಡಿಯೊಳಗೆ ಕೂಡಿಹಾಕಿ ಕುತ್ತಿಗೆಗೆ ಚಾಕು ಇರಿಸಿ ಬೆದರಿಸಿ ಕಳವು ನಡೆಸಿದ ಪ್ರಕರಣದ ಆರೋಪಿಯನ್ನು ಪೆÇಲೀಸರು ಗುಜರಾತ್‍ನಿಂದ ಬಂಧಿಸಿದ್ದಾರೆ.
ಗುಜರಾತ್ ನಿವಾಸಿ ಬಕ್ವಾಲಿ ಅಬ್ಬಾಸ್ ಅಲಿ ಸೈಯದ್ (46) ಬಂಧಿತ. ಚೇಮೇನಿ ಪೆÇಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪಟ್ಟೋಳಿ ತೋಡುವಳಂ ಮಾತ್ರೋಟಸ್ ವೀಡಿನ ಎಂ. ನಾರಾಯಣಿ (73) ಎಂಬವರ ಮನೆಗೆ ಕುಡಿಯಲು ನೀರು ಕೇಳಿ ಆಗಮಿಸಿದ್ದ ಆರೋಪಿ, ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನೀರುತರಲು ಒಳಗೆ ತೆರಳುತ್ತಿದ್ದ ವೃದ್ಧಯೆ ಹಿಂದಿನಿಂದ ಸಂಚರಿಸಿ, ನಾರಾಯಣಿ ಅವರನ್ನು ಕೊಠಡಿಯಲ್ಲಿ Pಕೂಡಿಹಾಕಿ ಕತ್ತಿಗೆ ಚಾಕು ಇರಿಸಿ ಕಿವಿಯಲ್ಲಿದ್ದ ಬೆಂಡೋಲೆ, ಕಪಾಟಿನಲ್ಲಿದ್ದ 10ಸಾವಿರ ರೂ. ನಗದು ಹಾಗೂ ಮೊಬೈಲ್ ಅಪಹರಿಸಿ ಪರಾರಿಯಾಗಿದ್ದನು. ಈ ಸಂದರ್ಭ. ಮನೆಯವರು ಮದುವೆ ಸಮಾರಂಭ ನಡೆಯುತ್ತಿದ್ದ ಆಡಿಟೋರಿಯಂಗೆ ತೆರಳಿದ್ದು, ನಾರಾಯಣಿ ಮಾತ್ರ ಮನೆಯಲ್ಲಿದ್ದರು.
ಮನೆಯಿಂದ ಕಳವುಗೈದ ಮೊಬೈಲ್ ಫೆÇೀನ್‍ನ ಲೊಕೇಶನ್ ಕೇಂದ್ರೀಕರಿಸಿ ಸೈಬರ್ ಪೆÇಲೀಸರ ಸಹಾಯದಿಂದ ಚೇಮೇನಿ ಪೆÇಲೀಸರು ನಡೆಸಿದ ಶೋಧದಲ್ಲಿ ಆರೋಪಿ ಗುಜರಾತ್‍ನಲ್ಲಿರುವ ಮಾಹಿತಿ ಲಭಿಸಿತ್ತು.
ಚೇಮೇನಿ ಠಾಣೆ ಎಸ್.ಐ ಎನ್.ಕೆ. ಶಶಿ, ಸೀನಿಯರ್ ಪೆÇಲೀಸ್ ಆಫೀಸರ್‍ಗಳಾದ ಪಿ. ರಾಜೀವನ್, ಸಿ. ರಜೀಶ್ ಮತ್ತು ಹೋಮ್ ಗಾರ್ಡ್ ಸುರೇಶ್ ಎಂಬವರ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

