ಕುಂಬಳೆ: ಕುಂಬಳೆ ಪೆರುವಾಡ್ ಭಜನಾ ಮಂದಿರ ಸನಿಹದ ನಿವಾಸಿ ಸತೀಶ್ (35) ಎಂಬವರ ಮೃತದೇಹ ಪೆರುವಾಡ್‍ನ ಮುಚ್ಚುಗಡೆಗೊಂಡಿದ್ದ ಗ್ಯಾರೇಜ್‍ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ 8ರ ವೇಳೆ ಸತೀಶ್ ತಾಯಿಗೆ ಫೆÇೀನ್ ಕರೆ ಮಾಡಿ ಮಾತನಾಡಿದ್ದು, ಅನಂತರ ಸತೀಶ್ ನಾಪತ್ತೆಯಾಗಿದ್ದರು. ಮನೆಯವರು ಕರೆ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಯವರು ಪೆÇಲೀಸ್ ಠಾಣೆಗೆ ತಲುಪಿ ಮಾಹಿತಿ ನೀಡಿದ್ದರು. ಪೆÇಲೀಸರು ಸತೀಶ್ ಅವರ ಫೆÇೀನ್ ಲೊಕೇಶನ್ ಪರಿಶೀಲಿಸಿದಾಗ ಪೆರುವಾಡ್ ಪರಿಸರದಲ್ಲಿರುವುದು ತಿಳಿದುಬಂದಿತ್ತು. ಬಳಿಕ ಮನೆಯವರು ಹಾಗೂ ಸಂಬಂಧಿಕರು ಸತೀಶ್ ಅವರ ಮೊಬೈಲ್‍ಗೆ ಕರೆ ಮಾಡುತ್ತಾ ಹುಡುಕಾಟ ಮುಂದುವರಿಸಿಸುವ ಮಧ್ಯೆ ಮುಚ್ಚುಗಡೆಗೊಳಿಸಿದ ಗ್ಯಾರೇಜ್‍ನೊಳಗೆ ಮೃತದೇಹ ಪತ್ತೆಯಾಗಿದೆ. ಸಾರಣೆ ಮೇಸ್ತ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

