HEALTH TIPS

ಕಡಲು ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಯುತ್ತಿವೆ: ಪಿಎಂ ಮೋದಿ

 ಕೋಲ್ಕತ್ತ: 'ದೇಶವೊಂದರ ಕಡಲ ಕಣ್ಗಾವಲು ಮತ್ತು ಭದ್ರತಾ ಬಲವು ಆ ದೇಶದ ಆರ್ಥಿಕತೆ ಮತ್ತು ಕಾರ್ಯತಂತ್ರವನ್ನು ನಿರ್ಧರಿಸುತ್ತವೆ. ಇದನ್ನು ಭಾರತ ಅರ್ಥ ಮಾಡಿಕೊಂಡಿದ್ದು, ಈ ಎಲವನ್ನೂ ಸಾಧ್ಯವಾಗಿಸಿಕೊಳ್ಳುವಲ್ಲಿ ಸಿದ್ಧತೆಗಳು ನಡೆಯುತ್ತಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. 


ಭಾರತದಲ್ಲಿಯೇ ನಿರ್ಮಾಣಗೊಂಡ ನೌಕಾ ಪಡೆಯ ಮೂರು ಹಡುಗುಗಳನ್ನು ಕೋಲ್ಕತ್ತದಲ್ಲಿರುವ ಶ್ಯಾಮಾ ಪ್ರಸಾದ್‌ ಮುಖರ್ಜಿ ಬಂದರಿನಲ್ಲಿ ಭಾನುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. 'ರಕ್ಷಣಾ ವಲಯದಲ್ಲಿ ಭಾರತವು ಖರೀದಿ ಮಾಡುವ ದೇಶವಾಗಿ ಮಾತ್ರವೇ ಉಳಿಯಬಾರದು' ಎಂದರು.

'2022ರಲ್ಲಿ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಲೋಕಾರ್ಪಣೆ ಮಾಡುವ ಮೂಲಕ ದೇಶವು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ನಡೆಯು ಸ್ವಾವಲಂಬನೆಯ ಕಡೆಗೇ ಇದೆ. ಕಡಲು ಕಣ್ಗಾವಲು ಮತ್ತು ಭದ್ರತಾ ಕ್ಷೇತ್ರವು ಭಾರತದಲ್ಲಿ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ. ಈ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿವೆ' ಎಂದು ಹೇಳಿದರು.

'ಈಗ ದೇಶವು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಹಡಗು ನಿರ್ಮಾಣ ಕ್ಷೇತ್ರದೆಡೆಗೆ ಸಾಗುತ್ತಿದೆ. ಹಡುಗು ನಿರ್ಮಾಣ, ದುರಸ್ತಿ, ಮರುಬಳಕೆ ಮತ್ತು ಎಂಆರ್‌ಒ (ನಿರ್ವಹಣೆ), ದುರಸ್ತಿ ಮತ್ತು ಆಪರೇಷನ್‌ ಅನ್ನು ಮಿಷನ್‌ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ' ಎಂದರು.

'ಹಡುಗು ನಿರ್ಮಾಣ ಕ್ಷೇತ್ರಕ್ಕೆ ₹70 ಸಾವಿರ ಕೋಟಿ ಪ್ಯಾಕೇಜ್‌ ನೀಡಲಾಗಿದೆ. ಇದು ಆರ್ಥಿಕ ನೆಲೆಯಲ್ಲಿ ತೆಗೆದುಕೊಂಡ ನಿರ್ಧಾರ ಮಾತ್ರವಲ್ಲ. ಇದು ಭಾರತದ ಕಡಲ ಕಣ್ಗಾವಲು ಮತ್ತು ಭದ್ರತೆ ಕ್ಷೇತ್ರದಲ್ಲಿ ಮಾಡಿದ ಹೂಡಿಕೆ' ಎಂದರು.

'ದೇಶದ ಪ್ರತಿಭೆಯ ಪ್ರತೀಕ':

ರೇಡಾರ್‌ ಕಣ್ತಪ್ಪಿಸಬಲ್ಲ ಸೇನಾನೌಕೆ ದುನಗಿರಿ ಕಡಲ ಕಣ್ಗಾವಲು ನೌಕೆ ಸಂಶೋಧಕ್‌ ಮತ್ತು ಜಲಾಂತರ್ಗಾಮಿ ತಡೆ ಹಡಗು ಅಗ್ರಯವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. 'ಐಎನ್‌ಎಸ್‌ ಅಗ್ರೇಯ ಐಎನ್‌ಎಸ್‌ ದುನಗಿರಿ ಮತ್ತು ಐಎನ್‌ಎಸ್‌ ಸಂಶೋಧಕ್‌ ಹಡಗುಗಳು ಕಡಲ ಕಣ್ಗಾವಲು ಮತ್ತು ಭದ್ರತೆಯ ಪ್ರಯಾಣಕ್ಕೆ ಮತ್ತಷ್ಟು ಶಕ್ತಿ ತುಂಬುತ್ತವೆ. ಈ ಮೂರು ಹಡಗುಗಳು ಭಾರತದಲ್ಲಿಯೇ ವಿನ್ಯಾಸಗೊಂಡಿದ್ದು ಮತ್ತು ತಯಾರಾಗಿದ್ದು ದೇಶದ ಪ್ರತಿಭೆಯ ಪ್ರತೀಕವಾಗಿವೆ' ಎಂದು ಪ್ರಧಾನಿ ಮೋದಿ ಹೇಳಿದರು. 'ಖರೀದಿ ಮಾಡುವ ದೇಶದಿಂದ ನಿರ್ಮಾಣ ಮಾಡುವ ದೇಶವಾಗಿ ಭಾರತವು ಬದಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು 40ಕ್ಕೂ ಹೆಚ್ಚು ಯುದ್ಧ ನೌಕೆಗಳು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಿದೆ. ಜೊತೆಗೆ 45 ದೊಡ್ಡ ಮಟ್ಟದ ನೌಕಾ ನೆಲೆಗಳು ನಿರ್ಮಾಣ ಹಂತದಲ್ಲಿವೆ' ಎಂದರು.'

ಶೇ 75 ದೇಶೀಯವಾಗಿ ನಿರ್ಮಾಣಗೊಂಡ ಹಡುಗುಗಳು

'ಭಾರತೀಯ ನೌಕಾ ಪಡೆಯ ವಾರ್‌ಶಿಪ್‌ ಡಿಸೈನ್‌ ಬ್ಯುರೊ ಈ ಮೂರು ಹಡಗುಗಳನ್ನು ವಿನ್ಯಾಸಗೊಳಿಸಿದೆ. ಕೋಲ್ಕತ್ತದ ರಕ್ಷಣಾ ಕ್ಷೇತ್ರದ ಸರ್ಕಾರಿ ಸ್ವಾಮ್ಯದ 'ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಮತ್ತು ಎಂಜಿನಿಯರ್ಸ್‌ ಲಿಮಿಟೆಡ್‌' ಹಡಗುಗಳನ್ನು ನಿರ್ಮಿಸಿದೆ. ಈ ಹಡುಗುಗಳ ನಿರ್ಮಾಣದಲ್ಲಿ ಬಳಸಲಾದ ಶೇ 75ಕ್ಕೂ ಹೆಚ್ಚು ಪ್ರಮಾಣದ ತಂತ್ರಜ್ಞಾನ ಮತ್ತು ಉಪಕರಣಗಳು ದೇಶದಲ್ಲಿಯೇ ಅಭಿವೃದ್ಧಿಪಡಿಸಿದಂತವು. ಜೊತೆಗೆ ನಿರ್ಮಾಣದಲ್ಲಿ 200ಕ್ಕೂ ಹೆಚ್ಚು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಶ್ರಮವಹಿಸಿವೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries