HEALTH TIPS

ಬಿಎಂಎಸ್ ಮೀಂಜ ಪಂಚಾಯತಿ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ


ಮಂಜೇಶ್ವರ
: ಭಾರತೀಯ ಮಜ್ಡೂರ್ ಸಂಘ ಮಿಂಜ ಪಂಚಾಯತಿ ಸಮ್ಮೇಳನ ಮೊರತ್ತಣೆ ಬಿ.ಆರ್. ಕಾಂಪ್ಲೆಕ್‍ನ ಅನುಗ್ರಹ ಸಭಾಂಗಣದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ರವಿಚಂದ್ರ ಶೆಟ್ಟಿ ಪದೆಂಜಿಬೈಲ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಮುಖ್ಯ ಭಾಷಣ ಮಾಡಿದರು. ನೂತನ ಪದಾಧಿಕಾರಿಗಳನ್ನು ವಲಯ ಅಧ್ಯಕ್ಷ ರವಿ ಎಂ.ಕೆ. ಕೋಳ್ಯೂರು ಆಯ್ಕೆ ಮಾಡಿದರು. ಪಂಚಾಯತಿ ಸದಸ್ಯೆ ಶಾಂತ ಕೋಳ್ಯೂರು, ಗೋಪಿನಾಥ್ ಮೊರತ್ತಣೆ ಭಾಗವಹಿಸಿದ್ದರು. ಸತೀಶ್ ಬಟ್ಯಪದವು ವರದಿ ಮಂಡಿಸಿದರು.

ನೂತನ ಅಧ್ಯಕ್ಷರಾಗಿ ಪ್ರಪುಲ್ಲ ಉಜಿರೆ. ಉಪಾಧ್ಯಕ್ಷರಾಗಿ ರವಿಚಂದ್ರ ಶೆಟ್ಟಿ ಪದೆಂಜಿ ಬೈಲ್, ರಾಮಚಂದ್ರ ಬಟ್ಯಪದವು, ಜಯಲಕ್ಸ್ಮಿ ಚಿಗುರುಪಾದೆ, ಕಾರ್ಯದರ್ಶಿಯಾಗಿ ಮನೋಜ್ ಬಟ್ಯಪದವು, ಜೊತೆ ಕಾರ್ಯದರ್ಶಿಗಳಾಗಿ ರಾಮಚಂದ್ರ ಕೌಡೂರ್, ರೋಹಿತ್ ಬೆಜ್ಜ, ಅರುಣ ಉಜಿರೆ, ಕೋಶಾಧಿಕಾರಿಯಾಗಿ ಬಾಲಕೈಷ್ಣ ಉಜಿರೆ ಹಾಗೂ ಸದಸ್ಯರಾಗಿ ಮಿಥುನ್ ಕೋಳ್ಯೂರು, ಮಿಥುನ್ ಕಳಿಯೂರು, ಸವಿತ ಕೋಳ್ಯೂರು, ಪ್ರತಾಪ್ ಮೊರತ್ತಣೆ, ಸಂದೀಪ್ ಕಡಂಬಾರು, ದಾಮೋದರ ಉಜಿರೆ. ಶಿವಕುಮಾರ್ ಬಟ್ಯಪದವು, ಜಯೇಶ್ ಬೆಜ್ಜರನ್ನು ಆರಿಸಲಾಯಿತು. ರಾಮಚಂದ್ರ ಬಟ್ಯಪದವು ಸ್ವಾಗತಿಸಿ, ಮನೋಜ್ ಬಟ್ಯಪದವು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries