HEALTH TIPS

ಟಿಎಂಸಿ ಸಂಸದರ ಬಂಡಾಯದ ಹಿಂದೆ ಅಮಿತ್ ಶಾ ಕೈವಾಡ: ಕಾಂಗ್ರೆಸ್ ಆರೋಪ

ನವದೆಹಲಿ: ಟಿಎಂಸಿ ಸಂಸದರ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಇತ್ತೀಚೆಗೆ ಟಿಎಂಸಿಯ 20 ಬಂಡಾಯ ಸಂಸದರು ಭಾರತೀಯ ರಾಷ್ಟ್ರೀಯತಾವಾದಿ ನಾಗರಿಕರ ಪಕ್ಷ(ಎನ್‌ಸಿಪಿಐ)ದೊಂದಿಗೆ ವಿಲೀನಗೊಂಡಿದ್ದರು.

ಅಮಿತ್‌ ಶಾ ಅವರ ಈ ವಿಲಕ್ಷಣ ನಡೆಯ ಹಿಂದೆ, ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತ ಸಾಧಿಸುವ ಉದ್ದೇಶವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ಮತ್ತು ಅಮಿತ್‌ ಶಾ ಅಧಿಕಾರದಲ್ಲಿರುವಷ್ಟು ದಿನ ಸಂವಿಧಾನದ ಮೌಲ್ಯ ಮತ್ತು ತತ್ವಗಳು ದುರ್ಬಲವಾಗಿರುತ್ತವೆ ಎಂದು ಕಿಡಿಕಾರಿದ್ದಾರೆ.

ಟಿಎಂಸಿಯ 20 ಬಂಡಾಯ ಸಂಸದರು ವಿಲೀನಗೊಂಡ ನಂತರ ತ್ರಿಪುರಾ ಮೂಲದ ಎನ್‌ಸಿಪಿಐ, ಎನ್‌ಡಿಎ ಮೈತ್ರಿಕೂಟದ ಎರಡನೇ ಅತಿದೊಡ್ಡ ಪಕ್ಷವಾಗಿದೆ.

2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎನ್‌ಸಿಪಿಐ, ಎಲ್ಲ ಕಡೆಗಳಲ್ಲೂ ಸೋಲನುಭವಿಸಿತ್ತು. ಮೂರು ಅಭ್ಯರ್ಥಿಗಳು ಕೂಡ ನೋಟಾಗಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries