ಬದಿಯಡ್ಕ: ಮವ್ವಾರು ಎಯುಪಿ ಶಾಲೆಯ ಪ್ರವೇಶೋತ್ಸವ ಸಂಭ್ರಮ ಸಡಗರದೊಂದಿಗೆ ಸೋಮವಾರ ಜರಗಿತು. ಸುಮಾರು 55 ಮಂದಿ ಮಕ್ಕಳು ಪ್ರೀ ಫ್ರೈಮರಿ ಹಾಗೂ ಒಂದನೇ ತರಗತಿಗೆ ಪ್ರವೇಶಪಡೆದರು. ಶಾಲೆಯಲ್ಲಿ ನಡೆದ ಪ್ರವೇಶೋತ್ಸವವು ವರ್ಣರಂಜಿತವಾಗಿತ್ತು. ಪಾಲಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನೂತನವಾಗಿ ಆರಂಭಿಸಲಾದ ಪ್ರೀ ಪ್ರೈಮರಿಯ ಉದ್ಘಾಟನೆ ಇದೇ ಸಂದರ್ಭದಲ್ಲಿ ನಡೆಯಿತು.

.jpg)
