ಕಾಸರಗೋಡು: ಬಿಜೆಪಿ ಉದುಮ ಮಂಡಲ ಸಮಿತಿ ವತಿಯಿಂದ ವಿಶ್ವಯೋಗ ದಿನಾಚರಣೆ ಅಂಗವಾಗಿ ಯೋಗ ದಿನವನ್ನು ಆಚರಿಸಲಾಯಿತು. ಪರವನಡ್ಕ ವಿಷ್ಣು ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಕೋಯಿಕ್ಕೋಡ್ ವಲಯ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಯೋಗವನ್ನು ಜೀವನದ ಒಂದು ಅಂಗವಾಗಿ ಸ್ವೀಕರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರಧಾನಿ ನರೇಂದ್ರಮೋದಿ ಅವರು ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಮಂಡಲ ಅಧ್ಯಕ್ಷೆ ಶೀನಾಮೋಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಕಾರ್ಯದರ್ಶಿ ಕೆ.ಟಿ. ಪುರುಷೋತ್ತಮನ್, ಮಾಧ್ಯಮ ಸಂಚಾಲಕ ವೈ.ಕೃಷ್ಣದಾಸ್, ಮಂಡಲ ಉಪಾಧ್ಯಕ್ಷ ನಾರಾಯಣನ್ ವಡಕಿನಿಯ, ಕಾರ್ಯದರ್ಶಿಗಳಾದ ಶ್ಯಾಮ್ ಪ್ರಸಾದ್ ಕಾಶಿ, ಸೌಮ್ಯ ಪದ್ಮನಾಭನ್, ??ಖಜಾಂಚಿ ವಿ.ಎ. ರತೀಶ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಉದುಮ ಮಂಡಲ ಸಮಿತಿ ವತಿಯಿಂದ ಯೋಗ ಕಾರ್ಯಕ್ರಮ
0
ಜೂನ್ 23, 2026

Tags