HEALTH TIPS

ಫ್ರಾನ್ಸ್‌ನ 'ಗ್ಯಾಲರೀಸ್ ಲಫಯೆಟ್ಟೆ'ಯಲ್ಲಿ ಯುಪಿಐ ಪಾವತಿ ಸೇವೆ ಆರಂಭ

 ನವದೆಹಲಿ: ಫ್ರಾನ್ಸ್‌ನ ನೈಸ್‌ನಲ್ಲಿರುವ ಪ್ರಸಿದ್ಧ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳಲ್ಲಿ ಒಂದಾಗಿರುವ ಗ್ಯಾಲರೀಸ್ ಲಫಯೆಟ್ಟೆಯಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವ್ಯವಸ್ಥೆಯು ಮಂಗಳವಾರ(ಜೂನ್ 16) ಪ್ರಾರಂಭವಾಗಿದೆ.


ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಯುಪಿಐ ಸೇವೆಗೆ ಚಾಲನೆ ನೀಡಿದರು.

ಈ ಕ್ರಮವು ಭಾರತ ಮತ್ತು ಫ್ರಾನ್ಸ್ ನಡುವಿನ ಆರ್ಥಿಕ ಮತ್ತು ತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿರುವ ಪಿಯೂಷ್ ಗೋಯಲ್, 'ಫ್ರಾನ್ಸ್‌ನ ನೈಸ್ ಮಾಸೆನಾದಲ್ಲಿರುವ ಗ್ಯಾಲರೀಸ್ ಲಫಯೆಟ್ಟೆಯಲ್ಲಿ ಯುಪಿಐ ಅನ್ನು ಪ್ರಾರಂಭಿಸಲು ಸಂತೋಷವಾಯಿತು. ಭಾರತದ ಡಿಜಿಟಲ್ ಪಾವತಿ ವೇದಿಕೆಯ ಜಾಗತಿಕ ವಿಸ್ತರಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ' ಎಂದು ಹೇಳಿದ್ದಾರೆ.

ಫ್ರಾನ್ಸ್‌ನ ಪ್ರಸಿದ್ಧ ಡಿಪಾರ್ಟ್‌ಮೆಂಟ್ ಸ್ಟೋರ್‌ ಸರಪಳಿಗಳಲ್ಲಿ ಒಂದಾಗಿರುವ ಗ್ಯಾಲರೀಸ್ ಲಫಯೆಟ್ಟೆಯಲ್ಲಿ ಸೌಂದರ್ಯವರ್ದಕಗಳು, ಉಡುಪುಗಳು ಸೇರಿದಂತೆ 600ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ವಸ್ತುಗಳು ಲಭ್ಯವಿದೆ.

2024ರಲ್ಲಿ ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಯುಪಿಐ ಸೇವೆಯನ್ನು ಪ್ರಾರಂಭಿಸಲಾಗಿತ್ತು.

ಫ್ರಾನ್ಸ್‌, ಸಿಂಗಾಪುರ, ಯುಎಇ, ಮಾರಿಷಸ್, ನೇಪಾಳ, ಭೂತಾನ್, ಕತಾರ್, ಶ್ರೀಲಂಕಾ ಮತ್ತು ಕಾಂಬೋಡಿಯಾ ಸೇರಿದಂತೆ ಒಂಬತ್ತು ದೇಶಗಳಲ್ಲಿ ಯುಪಿಐ ವಾಪತಿ ಸೇವೆಯನ್ನು ಆರಂಭಿಸಲಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries