HEALTH TIPS

ವಿದೇಶಿ ಗ್ಯಾಂಗ್‌ಸ್ಟರ್‌ಗಳ ನಂಟು: ಮೂವರ ಬಂಧನ

 ಚಂಡೀಗಢ: ವಿದೇಶಿ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಪಂಜಾಬ್‌ ಪೊಲೀಸರು, ಅವರ ಬಳಿ ಇದ್ದ ಮೂರು ಅತ್ಯಾಧುನಿಕ ‍ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. 


ಈ ಬಗ್ಗೆ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಡಿಜಿಪಿ ಗೌರವ್‌ ಯಾದವ್‌ 'ರಾಜ್ಯ ವಿಶೇಷ ಕಾರ್ಯಾಚರಣೆ ದಳ (ಎಸ್‌ಎಸ್‌ಒಸಿ) ಹಾಗೂ ಗುಪ್ತಚರ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಪತ್ತೆ ಹಚ್ಚಿವೆ.

ಈ ಬಗ್ಗೆ ಅಮೃತಸರದ ಎಸ್‌ಎಸ್‌ಒಸಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ' ಎಂದಿದ್ದಾರೆ.

'ವಿದೇಶದಲ್ಲಿರುವ ಗ್ಯಾಂಗ್‌ಸ್ಟರ್‌ಗಳ ಆದೇಶದಂತೆ, ಆರೋಪಿಗಳು ಪಂಜಾಬ್‌ನಲ್ಲಿ ಗ್ಯಾಂಗ್‌ವಾರ್‌ಗಳು, ದರೋಡೆ ಹಾಗೂ ಇತರ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ' ಎಂದು ತಿಳಿಸಿದ್ದಾರೆ.

ಅನ್ಮೋಲ್‌ ಸಿಂಗ್‌ ಅಲಿಯಾಸ್ ಮೊಹ್ಲಾ, ಜಗರೂಪ್‌ ಸಿಂಗ್‌ ಅಲಿಯಾಸ್‌ ರೂಪಾ ಹಾಗೂ ಮೋಹಿತ್‌ ಕುಮಾರ್‌ ಅಲಿಯಾಸ್‌ ಜೋಬನ್‌ ಬಂಧಿತ ಆರೋಪಿಗಳು.

ಅಮೃತಸರದಲ್ಲಿ ದಾಖಲಾಗಿರುವ ಕೊಲೆ ಹಾಗೂ ಬಟಾಲಾದಲ್ಲಿನ ಕೊಲೆ ಯತ್ನ ಪ್ರಕರಣಗಳಲ್ಲಿ ಈ ಮೂವರೂ ಆರೋಪಿಗಳು ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries