ಪೆರ್ಲ: ಪೆರ್ಲ ಸನಿಹದ ಮಣಿಯಂಪಾರೆ ಮಂಜೊಟ್ಟಿ ನಿವಾಸಿ ದೇವಣ್ಣ ನಾಯ್ಕ್-ಲಲಿತ ದಂಪತಿ ಪುತ್ರ ಪ್ರವೀಣ (41)ಅವರ ಮೃತದೇಹ ಮನೆಯೊಳಗೆ ನಿಗೂಢವಾಗಿ ಪತ್ತೆಯಾಗಿದೆ. ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಇವರ ಸಹೋದರಿ ಹಲವು ಬಾರಿ ಮೊಬೈಲ್‍ಗೆ ಕರೆಮಾಡಿದರೂ, ಕರೆ ಸವೀಕರಿಸದಿರುವುದರಿಂದ ಮನೆ ಕಡೆ ತೆರಳಿನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಲಿ ಕಾರ್ಮಿಕನಾಗಿದ್ದ ಇವರು, ಅವಿವಾಹಿತರಾಗಿದ್ದರು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


