ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿಯ ವಿವಿಧ ವಾರ್ಡುಗಳ ಗ್ರಾಮಸಭೆ ಮಂಗಳವಾರ ಆರಂಭವಾಯಿತು. ಒಟ್ಟು 21 ವಾರ್ಡುಗಳಲ್ಲಿ ಒಂದನೇ ವಾರ್ಡು ಗ್ರಾಮಸಭೆ ಕಿಳಿಂಗಾರು ಎ.ಎಲ್.ಪಿ.ಶಾಲೆಯಲ್ಲಿ ಜರಗಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮನೋಜ್ ಕುಮಾರ್, ಕೃಷಿ ಸಹಾಯಕ ಅಧಿಕಾರಿ ಮೋಹನನ್, ಗ್ರಾಮ ಪಂಚಾಯಿತಿ ಸದಸ್ಯೆ ಬಿಂದ್ಯಾ ಕಾರ್ತಿಕ್ ಮೊದಲಾದವರು ಪಾಲ್ಗೊಂಡಿದ್ದರು. ವಾರ್ಡು ಸದಸ್ಯ ಹರೀಶ ಸ್ವಾಗತಿಸಿದರು.

.jpg)
